HEALTH TIPS

ಕೋಡಿಯಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆ

ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದಿಂದ  ಮೀಯಪದವು ಸಮೀಪದ ಕೋಡಿ ಶ್ರೀ ರಕ್ತೇಶ್ವರೀ ಪ್ರಸಾದಿತ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆಗೊಂಡಿತು. ಭಾಗವತರಾದ ರತ್ನಾಕರ ಅಳ್ವ ತಲಪಾಡಿ ಇವರು ಯಕ್ಷಗಾನ ಹಿಮ್ಮೇಳದೊಂದಿಗೆ ಪ್ರಾರ್ಥನೆಗೈದರು. ಬಳಿಕ ಬೇರಿಕೆ ರಕ್ತೇಶ್ವರಿ ಕ್ಷೇತ್ರದ ಗೌರವಾಧ್ಯಕ್ಷ  ಶಿವಪ್ರಸಾದ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರುಗಳಾದ ಕೃಷ್ಣಪ್ಪ ಕಿನ್ಯ ಹಾಗೂ ಸತೀಶ ಅಡಪ ಸಂಕಬೈಲು ಅವರು ಯಕ್ಷಗಾನ ಅಕಾಡೆಮಿಯ ಬಗ್ಗೆ ವಿವರಣೆ ನೀಡಿದರು.

ಇನ್ನೊಬ್ಬರು ಮುಖ್ಯ ಅತಿಥಿಗಳಾದ ಮೀಯಪದವು ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾವi ರಾವ್ ಅವರು ಯಕ್ಷಗಾನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಯಕ್ಷಗಾನ ಅಧ್ಯಯನ  ಕೇಂದ್ರದ ಅಧ್ಯಕ್ಷ ವಾಸುದೇವ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಸದಾಶಿವ ರೈ ಪಳ್ಳತ್ತಡ್ಕ, ನಾರಾಯಣ ಪೂಜಾರಿ ಬೆಜ್ಜಂಗಳ, ನಾರಾಯಣ ಬಂಗೇರ ಕೊಮ್ಮಂಗಳ, ದಿನಕರ ಭಟ್ ಕೋಡಿ, ರಾಜಾನಂದ ಶೆಟ್ಟಿ, ಯೋಗೀಶ ಶೆಟ್ಟಿ ಹಾಗೂ ತರಬೇತಿ ಕೇಂದ್ರದ ಮಹಿಳಾ ಸದಸ್ಯೆ ಭಾಗ್ಯಲಕ್ಷ್ಮಿ ಬೇರಿಕೆ ಉಪಸ್ಥಿತರಿದ್ದರು. ಸದಾಶಿವ ಶೆಟ್ಟಿ ಪಳತ್ತಡ್ಕ ಸ್ವಾಗತಿಸಿ, ಪದ್ಮನಾಭ ಕಟ್ಟೆ ವಂದಿಸಿದರು. ಪುಷ್ಪರಾಜ ಶೆಟ್ಟಿ ತಲೇಕಳ ಕಾರ್ಯಕ್ರಮ  ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries