HEALTH TIPS

ಅಯ್ಯಪ್ಪ ಭಕ್ತರಿಗೆ ಬೆಂಬಲವಾಗಿ "ಸ್ವಾಮಿ ಚಾಟ್‍ಬಾಟ್"; ಆರು ಭಾಷೆಗಳಲ್ಲಿ 'ಹಾಯ್' ಮಾಹಿತಿಯನ್ನು ಕಳುಹಿಸಿ ಸೇರಬಹುದು

ಶಬರಿಮಲೆ: ಮಂಡಲ ಅವಧಿಗೆ ಸಂಬಂಧಿಸಿದಂತೆ ಅಯ್ಯಪ್ಪ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಯಾತ್ರೆ ಕೈಗೊಳ್ಳಲು ಅಧಿಕಾರಿಗಳು ಗಮನಹರಿಸಿದ್ದಾರೆ.

ಇದೀಗ ಅಯ್ಯಪ್ಪ ಭಕ್ತರಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅಗತ್ಯ ನೆರವು ನೀಡಲು ಸ್ವಾಮಿ ಚಾಟ್‍ಬಾಟ್ ಸಿದ್ದಗೊಂಡಿದೆ. ಸ್ವಾಮಿ ಚಾಟ್‍ಬಾಟ್‍ನ ಸೇವೆಯು ಪ್ಲೇ ಸ್ಟೋರ್ ಮೂಲಕ ಲಭ್ಯವಿದೆ.


ಮುತ್ತೂಟ್ ಗ್ರೂಪ್‍ನ ಸಹಾಯದಿಂದ ಪತ್ತÀನಂತಿಟ್ಟ ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ವಾಮಿ ಚಾಟ್‍ಬಾಟ್ ಅನ್ನು ಪ್ರಾರಂಭಿಸಲಾಗಿದೆ. 6238008000 ಪೋನ್ ಸಂಖ್ಯೆಗೆ ವಾಟ್ಸಾಪ್ ಮೂಲಕ ವ್ಯವಸ್ಥೆಯನ್ನು ಪಡೆಯಬಹುದು. ನೀವು ಈ ಸಂಖ್ಯೆಗೆ 'ಹಾಯ್' ಎಂದು ಕಳುಹಿಸಿದರೆ, ನೀವು ಮಲಯಾಳಂ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಎಂಬ ಆರು ಭಾಷೆಗಳಲ್ಲಿ ಮಾಹಿತಿಯನ್ನು ಪಡೆಯಬಹುದು. ದೇವಾಲಯದ ಪೂಜಾ ಸಮಯಗಳು ಮತ್ತು ಇತರ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.

ಈ ಚಾಟ್‍ಬಾಟ್ ಮೂಲಕ ಭಕ್ತರಿಗೆ ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಂತಹ ಮಾಹಿತಿ ಲಭ್ಯವಾಗುತ್ತದೆ. ಪೋಲೀಸ್, ಆರೋಗ್ಯ, ಅಗ್ನಿಶಾಮಕ ದಳ, ಆಹಾರ ಭದ್ರತೆ ಮತ್ತು ಅರಣ್ಯದಂತಹ ಪ್ರಮುಖ ಇಲಾಖೆಗಳ ಸೇವೆಗಳನ್ನು ಸಹ ಎ.ಐ. ಚಾಟ್‍ಬಾಟ್ ಸಹಾಯದಿಂದ ತಿಳಿಯಬಹುದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಚಾಟ್‍ಬಾಟ್ ನಿಖರವಾದ ಸುರಕ್ಷತಾ ಎಚ್ಚರಿಕೆಗಳನ್ನು ಸಹ ನೀಡುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries