HEALTH TIPS

ಸಂಸ್ಕೃತ (ಕಾನೂನು) ಶಿಕ್ಷಕರ ಹುದ್ದೆ


 ಸರಕಾರಿ ಆಯುರ್ವೇದ ಕಾಲೇಜು ಕಣ್ಣೂರು ಪರಿಯಾರಂ ನಲ್ಲಿರುವ ಸಂಹಿತಾ ಸಂಸ್ಕೃತ ಸಿದ್ಧಾಂತ ವಿಭಾಗದಲ್ಲಿ ಖಾಲಿ ಇರುವ ಸಂಸ್ಕೃತ (ಕಾನೂನು) ಶಿಕ್ಷಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಉದ್ಯೋಗಾರ್ಥಿಗಳಿಗೆ ಪ್ರಸ್ತುತ ಯುಜಿಸಿ ನಿಯಮಾವಳಿಯ ಪ್ರಕಾರ  ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ ಮಾಡಲಿರುವ ಅರ್ಹತೆಗಳಿರಬೇಕು. ನೆಟ್/ಪಿ.ಎಚ್ ಡಿ ಅರ್ಹತೆಯಿರುವ ಉದ್ಯೋಗಾರ್ಥಿಗಳ ಅನುಪಸ್ಥಿತಿಯಲ್ಲಿ  ಸಂಬಂಧಪಟ್ಟ ವಿಷಯದಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಕೆಲಸದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.   ಅಭ್ಯರ್ಥಿಗಳು ಜನನ ದಿನಾಂಕ, ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವಗಳ ಅಸಲಿ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬಯೋ-ಡೇಟಾಗಳ ಪ್ರತಿಗಳ ಸಹಿತ ನವೆಂಬರ್ 22 ರಂದು ಬೆಳಗ್ಗೆ 11 ಗಂಟೆಗೆ ಪರಿಯಾರ ದಲ್ಲಿರುವ ಕಣ್ಣೂರು ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.  ದೂರವಾಣಿ ಸಂಖ್ಯೆ : 0497 2800167

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries