ಕಾಸರಗೋಡು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ವಿಶೇಷ ಮಾರಾಟ ಮೇಳವನ್ನು ಕಾಞಂಗಾಡು ಮಾವುಂಗಲ್‍ನಲ್ಲಿ ಆರಂಭಿಸಲಾಯಿತು. ಖಾದಿ ಗ್ರಾಮ ಸೌಭಾಗ್ಯ ವಠಾರದಲ್ಲಿ ಕೇರಳ ಖಾದಿ ಗ್ರಾಮ ವ್ಯವಸಾಯ ಮಂಡಳಿಯ ವತಿಯಿಂದ ಆರಂಭಿಸಲಾಗಿರುವ ಜಿಲ್ಲಾ ಮಟ್ಟದ ಖಾದಿ ಮೇಳವನ್ನು ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಉದ್ಘಾಟಿಸಿದರು.
ಪಯ್ಯನ್ನೂರು ಖಾದಿ ಕೇಂದ್ರ ನಿರ್ದೇಶಕ ವಿ.ಶಿಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೋದ್ಯೋಗ ಅಧಿಕಾರಿ ಟಿ.ವಿ.ವಿನೋದ್ ಕುಮಾರ್, ಸಹಾಯಕ ನೋಂದಣಾಧಿಕಾರಿ ಎಂ.ಸಿ.ಶಬೀನಾ ಸಮಾರಂಬದಲ್ಲಿ ಉಪಸ್ಥಿತರಿದ್ದರು. ಯೋಜನಾಧಿಕಾರಿ ಪಿ.ಸುಭಾಷ್ ಸ್ವಾಗತಿಸಿದರು. ಗ್ರಾಮ ಸೌಭಾಗ್ಯ ವ್ಯವಸ್ಥಾಪಕಿ ಕೆ.ಅಪರ್ಣಾ ವಂದಿಸಿದರು.


