HEALTH TIPS

ಪತ್ರಕರ್ತರಿಗೆ ಪೊಲೀಸ್ ಕಿರುಕುಳ-ಕೆಯುಡಬ್ಲ್ಯೂಜೆಯಿಂದ ಪ್ರತಿಭಟನೆ

ಕಾಸರಗೋಡು: ಸುದ್ದಿಮೂಲದ ಬಗ್ಗೆ ಮಾಹಿತಿ ಒದಗಿಸುವಂತೆ ಪತ್ರಕರ್ತರೊಬ್ಬರಿಗೆ ಪೊಲೀಸರು ನೀಡುತ್ತಿರುವ ಕಿರುಕುಳ ಪ್ರತಿಭಟಿಸಿ ಕೇರಳ ವರ್ಕಿಂಗ್ ಜರ್ನಲಿಸ್ಟ್ ಯೂನಿಯನ್(ಕೆಯುಡಬ್ಲ್ಯೂಜೆ)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ, ಸಭೆ ಕಾಸರಗೋಡು ನಗರದಲ್ಲಿ ಜರುಗಿತು.

ಪತ್ರಕರ್ತ ಅನಿರು ಅಶೋಕನ್ ಎಂಬವರ ಮೊಬೈಲ್ ವಶಪಡಿಸಿಕೊಂಡಿರುವ ಕ್ರೈಂ ಬ್ರಾಂಚ್ ಪೊಲಿಸರ ಕ್ರಮ ಖಂಡಿಸಿ ಪತ್ರಕರ್ತರು ರಾಜ್ಯವ್ಯಾಫಿಯಾಗಿ ನಡೆಸಿದ ಪ್ರತಿಭಟನೆ ಅಂಗವಾಗಿ ಕಾಸರಗೋಡಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾಸರಗೋಡು ಪ್ರೆಸ್ ಕ್ಲಬ್ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರೆಸ್‍ಕ್ಲಬ್ ಜಂಕ್ಷನ್ ಮೂಲಕ ಸಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಸಮಾರೋಪಗೊಂಡಿತು. 

ಈ ಸಂದರ್ಭ ನಡೆದ ಪ್ರತಿಭಟನಾ ಸಭೆಯಲ್ಲಿ  ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಮಾಜಿ ಸದಸ್ಯ ಕೆ.ವಿ.ಪದ್ಮೇಶ್, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಅಬ್ದುಲ್ಲಕುಞÂ ಉದುಮ, ಜತೆ ಕಾರ್ಯದರ್ಶಿ ಪುರುಷೋತ್ತಮ್ ಪೆರ್ಲ, ಶಫೀಕ್ ನಸರುಲ್ಲಾ, ಶಾಫಿ ತೆರುವತ್, ಉದಿನೂರು ಸುಕುಮಾರನ್ ಉಪಸ್ಥಿತರಿದ್ದರು.

ಖಾಲಿದ್‍ಪೆÇವ್ವಾಲ್, ದೇವದಾಸ್ ಪರಕಟ್ಟೆ, ಮಣಿಕಂಠನ್ ಪಾಲಿಚ್ಚಿಯಡ್ಕ, ಕುಞÂಕಣ್ಣನ್ ಮುಟ್ಟತ್, ಅಮಲ್, ಜುಬೇರ್ ಪಳ್ಳಿಕಲ್ ಮೊದಲಾದವರು ಮೆರವಣಿಗೆ ನೇತೃತ್ವ ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries