ಪೆರ್ಲ: ಸಮರ್ಥ ಹಾಗೂ ಉತ್ತಮ ಗುರುವಿನಿಂದ ಸುಸ್ಥಿರ ಸಮಾಜದ ನಿರ್ಮಾಣ ಸಾಧ್ಯ ಎಂಬುದಾಗಿ ಹರಿದಾಸ ಪುಂಡರೀಕಾಕ್ಷ ಆಚಾರ್ಯ ಬೆಳ್ಳೂರು ತಿಳಿಸಿದ್ದಾರೆ. ಅವರು 48ವರ್ಷಗಳ ಕಾಲ ಶ್ರೀ ಅಯ್ಯಪ್ಪ ವ್ರತಧಾರಿಯಾಗಿ ನೂರಾರು ಮಂದಿ ಶಿಷ್ಯಂದಿರಿಗೆ ಮುದ್ರಾಧಾರಣೆ ನಡೆಸಿರುವ ಗುರುಸ್ವಾಮಿ ಶ್ರೀಧರ ಬಜಕೂಡ್ಲು ಅವರಿಗೆ ಶಿಷ್ಯವೃಂದದಿಂದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಬಜಕೂಡ್ಲು ಶ್ರೀ ಮಹಾಲಿಂಗೆಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಮುಖ್ಯ ಅರ್ಚಕ ವಿಷ್ಣು ನಾವಡ ಅನುಗ್ರಹ ಭಾಷಣ ಮಾಡಿದರು. ಗುರುಸ್ವಾಮಿ ಸೀತಾರಾಮ ಪಳ್ಳತ್ತಡ್ಕ, ರವಿ ಸೂರ್ಡೇಲು, ರಂಜಿತ್, ವಿಶ್ವ ಮೊದಲಾದವರು ಉಪಸ್ಥಿತರಿದ್ದರು. ಶಶಿಕಾಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಧರ ಗುರುಸ್ವಾಮಿ ಅವರ ಶಿಷ್ಯವೃಂದದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಭಜನೆ, ಗುರುವಂದನೆ, ಪಾದಪೂಜೆ ನಡೆಯಿತು.


