HEALTH TIPS

ಕೇರಳ ತುಳು ಅಕಾಡೆಮಿಯಿಂದ 36 ದೈವಾರಾಧನೆ ಕಲಾವಿದರಿಗೆ ಸನ್ಮಾನ- ದೈವಾರಾಧಕ ಕಲಾವಿದರ ಅಭಿನಂದನೆ ಸ್ತುತ್ಯರ್ಹ-ಎಡನೀರು ಶ್ರೀ

ಬದಿಯಡ್ಕ: ದೈವ ನರ್ತನ ಒಂದು ಸಂಸ್ಕøತಿ, ಧಾರ್ಮಿಕತೆ, ವಿಶ್ವಾಸವಾಗಿದೆ. ತ್ಯಾಗಮಯಿಗಳಾದ ದೈವನರ್ತಕರ ಸೇವೆ ಶ್ರೇಷ್ಠವಾದದ್ದು. ದೈವನರ್ತಕರು ಉಪೇಕ್ಷಿಸಲ್ಪಡಬಾರದು.ಅವರನ್ನು ಅಭಿನಂದಿಸುವ ಮೂಲಕ ಕೇರಳ ತುಳು ಅಕಾಡೆಮಿ ಕಲೆ ಮತ್ತು ಕಲಾವಿದರನ್ನು ಗುರುತಿಸಿದೆ. ನಿಜವಾಗಿಯೂ ಎಡನೀರು ಮಠದಲ್ಲಿ ನಡೆದ ಈ  ಸನ್ಮಾನ ವಿಶಿಷ್ಟ ಮತ್ತು ಅನುಕರಣೀಯ ಎಂದು ಶ್ರೀಮದ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ  ನುಡಿದರು.

ಕೇರಳ ತುಳು ಅಕಾಡೆಮಿಯು ಭಾನುವಾರ ಅಪರಾಹ್ನ ಎಡನೀರು ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ  ತುಳುನಾಡಿನ ದೈವ ನರ್ತಕರ ಮತ್ತು ಪಾಡ್ದನ ಕಲಾವಿದರ 'ಮಾನಾದಿಗೆ' ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.


ತ್ಯಾಗಮಯಿಗಳಾದ ತುಳು ನಾಡಿನ  ದೈವ ನರ್ತಕರ ಮತ್ತು ಪಾಡ್ದನ ಕಲಾವಿದರನ್ನು ಸನ್ಮಾನಿಸಿದ  ತುಳು ಅಕಾಡೆಮಿಯ ಕೆಲಸ ನಿಜಕ್ಕೂ ವಿನೂತನ ಮತ್ತು ಶ್ಲಾಘನೀಯ ಎಂದರು.  ಮುಂದೆಯೂ ಒಳ್ಳೆಯ ಕಾರ್ಯಕ್ರಮ ಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು.

ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ  ಕೊಂಡೆವೂರು ಮಠದ  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು, ಭೂತರಾಧನೆ ಎನ್ನುವುದು ತುಳುನಾಡಿನ ಸಂಸ್ಕೃತಿ ಯ ಮತ್ತು ತುಳು ಭಾμÉಯ ರಕ್ಷಣೆಯಾಗಿದೆ. ಜನರ ಆತ್ಮವಿಶ್ವಾಸಕ್ಕೆ ಶಕ್ತಿ ತುಂಬುವ ಕಾರ್ಯವಾಗಿದೆ.ಭಕ್ತಿಯ, ಸಂಸ್ಕೃತಿಯ, ಸಾಮರಸ್ಯವನ್ನು ಎತ್ತಿಹಿಡಿಯುವ ಎಡನೀರು ಮಠದಲ್ಲಿ ನಡೆದ ಈ ತ್ಯಾಗಮಯಿ ಗಳಾದ ಹಿರಿಯ ದೈವ ನರ್ತಕರನ್ನು, ಪಾಡ್ದನ ಕಲಾವಿದರನ್ನು ಗೌರವಿಸುವ ಅಕಾಡೆಮಿಯ ಕೆಲಸ  ನಿಜಕ್ಕೂ  ಅಭಿನಂದನಾರ್ಹ ಎಂದರು.


ಮುಖ್ಯ ಅತಿಥಿಯಾಗಿದ್ದ ಉದುಮ ಶಾಸಕ  ವಕೀಲ ಸಿ. ಎಚ್ ಕುಞ್ಞಂಬು ಅವರು ಮಾತನಾಡಿ, ದೈವ ನರ್ತಕರಿಗೆ ಸರ್ಕಾರದಿಂದ ಇನ್ನಷ್ಟು ಸವಲತ್ತಿಗಾಗಿ ಶ್ರಮಿಸುವೆ, ದೈವ ನರ್ತಕರೆಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಈ ಐತಿಹಾಸಿಕ ತುಳು ನಾಡಿನ ಕಲೆಯ ಮಹತ್ವವನ್ನು ಉಳಿಸಿ ಬೆಳೆಸಬೇಕು ಎಂದು ಕರೆಕೊಟ್ಟರು. ಕಲಾವಿದರನ್ನು ಪ್ರೋತ್ಸಾಹಿಸುವ , ಗೌರವಿಸುವ ಕೆಲಸಗಳು ಅಕಾಡೆಮಿಯಿಂದ ನಿರಂತರವಾಗಿ ನಡೆಯುತ್ತಿದೆ. ಇದು ಶ್ಲಾಘನೀಯ ಎಂದರು.

ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ಅವರು ಸರ್ವ ಧರ್ಮಿಯರಿಗೂ ಆಪ್ತರಾದ ಕೊಂಡೆವೂರು ಹಾಗೂ ಎಡನೀರು ಸ್ವಾಮೀಜಿ ಯವರ ಸಮ್ಮುಖದಲ್ಲಿ  ಎಡನೀರು ಮಠದಲ್ಲಿ ನಡೆದ ಈ ಕಾರ್ಯಕ್ರಮ ಅತ್ಯoತ  ಅವಿಸ್ಮರಣೀಯ ಎಂದರು. ಅಕಾಡೆಮಿ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ನಡೆಸಲು ಉತ್ಸುಕವಾಗಿದೆ ಎಂದರು.


ಚೆಂಗಳ ಗ್ರಾಮ ಪಂಚಾಯತಿನ ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಸಲೀಂ , ಎಡನೀರು ಮಠದ ಪ್ರಬಂಧಕ  ರಾಜೇಂದ್ರ ಕಲ್ಲೂರಾಯ, ಜೈ ತುಳುನಾಡ್ (ರಿ) ಕಾಸರಗೋಡು ಘಟಕದ ಕಾರ್ಯದರ್ಶಿ ಹರಿಕಾಂತ್, ಸಿ.ವಿ. ಕೃಷ್ಣನ್ ಉಪಸ್ಥಿತರಿದ್ದು ಶುಭಹಾರೈಸಿದರು. ಸ್ವಾಮೀಜಿಯವರ ಮತ್ತು ಎಲ್ಲಾ ಅತಿಥಿಗಳ ಸಮಕ್ಷಮದಲ್ಲಿ 36 ಮಂದಿ ದೈವ ನರ್ತಕರಿಗೆ ಮತ್ತು ಪಾಡ್ದನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ  ಪ್ರದೀಪ್ ಕುಮಾರ್ ಬಿ  ಸ್ವಾಗತಿಸಿ, ಅಕಾಡೆಮಿ ಸದಸ್ಯ  ಅಜಿತ್ ಎಮ್. ಸಿ. ವಂದಿಸಿದರು. ಅಕಾಡೆಮಿ ಸದಸ್ಯರಾದ ಕೃಷ್ಣವೇಣಿ ಬಿ ಮತ್ತು ಉದಯ ಸಾರಂಗ್ ಕಾರ್ಯಕ್ರಮ  ನಿರೂಪಿಸಿದರು. ಈ ಸಂದರ್ಭ ವಿವಿಧ ತಂಡಗಳಿಂದ ಜಾನಪದ ನೃತ್ಯ ಹಾಗೂ ಗಾಯನ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries