ಕುಂಬಳೆ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧೀನದಲ್ಲಿರುವ ಫಾಳಿಲ ಕೋರ್ಸಿನ ಮೊದಲ ಸನದುದಾನ ಸಮ್ಮೇಳನ ನಾಳೆ(ಜನವರಿ 29) ಬೇಕೂರಿನ ಸೀ ಪಾಲಸ್ ಇಂಟನ್ರ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಸೋಮವಾರ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಓಬರ್ಲೆ ಬೇಕೂರಿನ ನೂರುಲ್ ಹುದಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಫಳೀಲ ಕೋರ್ಸ್‍ಗಳು ನಡೆಯುತ್ತಿವೆ. 2019ರಲ್ಲಿ ಪ್ರಾರಂಭಿಸಿದ ಕೌನ್ಸಿಲ್ ಓಫ್ ಸಮಸ್ತ ವಿಮೆನ್ಸ್ ಕಾಲೇಜಿನ ಅಧೀನದಲ್ಲಿ ನೂರಕ್ಕೂ ಅಧಿಕ ಡೇ ಕಾಲೇಜುಗಳು ಕಾರ್ಯಚರಿಸುತ್ತಿದೆ. ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯ ಸಮಾಲೋಚನೆ ಸಭೆ ಸೀ ಪಾಲಸ್ ನಲ್ಲಿ ನಡೆಯಿತು. ಯಶಸ್ವಿ ಹಾಗು ಪ್ರಚಾರದ ಬಗ್ಗೆ ಹಲವು ಯೋಜನೆಗಳು ಸಭೆಯಲ್ಲಿ ಚರ್ಚಿಸಲಾಗಿದೆ. ಎಸ್ ಎಸ್ ಎಲ್ ಸಿ ಯ ನಂತರ ಮುಂದಿನ ಅಧ್ಯಯನ ಆಲೋಚಿಸುವ ವಿಧ್ಯಾರ್ಥಿನಿಗಳಿಗೆ ಉತ್ತಮ ಹಾಗು ಸುರಕ್ಷಿತ ವ್ಯವಸ್ಥೆ ಫಾಳಿಲ ಕೋರ್ಸ್. ಚಿಂತಕರೂ, ಪಂಡಿತರೂ ಸಂಪನ್ಮೂಲ ವ್ಯಕ್ತಿಗಳ ನಿಯಂತ್ರಣದಲ್ಲಿ ಆಟ್ರ್ಸ್ ವಿಷಯದಲ್ಲಿ ಹ್ಯೂಮನಿಟಿ, ಅಕೌಂಟ್ ವಿಭಾಗದಲ್ಲಿ ಆಸಕ್ತಿಯಿರುವವರಿಗೆ ಕೋಮರ್ಸ್ ಸಹ ಫಾಳಿಲ ಕೋರ್ಸಿನೊಂದಿಗೆ ನೀಡಲಾಗುತ್ತದೆ. ಪದವಿ ಶಿಕ್ಷಣ ಪೂರ್ಣಗೊಳಿಸಿದವರಿಗೆ ಸಮಸ್ತ ನಡೆಸುವ ಕಾರ್ಯಕ್ರಮಗಳಲ್ಲಿ ಫಳೀಲ ಸನದು ಸಹ ನೀಡಲಾಗುತ್ತಿದೆ.
ನಾಳೆ ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗುವ ಸನದುದಾನ ಸಮಾರಂಭ ಸಮಸ್ತ ಫಳೀಲ ಸಿ.ಎಸ್.ಡಬ್ಯುಸಿ ಅಧ್ಯಕ್ಷ ಶೈಖುನಾ ಎಂಟಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಎಂ.ಎಚ್.ಡಬ್ಲ್ಯು ಎಸ್ ಸಿ ಅಧ್ಯಕ್ಷ ಉಸ್ತಾದ್ ಅಬ್ದುಲ್ ಮಜೀದ್ ದಾರಿಮಿ ಅಧ್ಯಕ್ಷತೆ ವಹಿಸಲಿದ್ದು, ಉಸ್ತಾದ್ ಸುಲೈಮಾನ್ ಫೈಝಿ ಚುಂಗತ್ತರ ಸನದುದಾನ ಭಾಷಣ ಮಾಡಲಿದ್ದಾರೆ. ಅಕಾಡೆಮಿ ಪರಿಚಯವನ್ನು ಸಅದ್ ಫೈಝಿ ಅಲ್ ಬುರ್ಹಾನಿ ನಿಯಂತ್ರಿಸಲಿದ್ದಾರೆ. ಮುಂದಿನ ಯೋಜನಗಳ ಕುರಿತು ಸ್ವಾಗತ ಸಮಿತಿ ಅಧ್ಯಕ್ಷ ಅಬೂಬಕರ್ ರೋಯಲ್ ಬಳ್ಳೂರ್ ವಿವರಿಸಲಿದ್ದಾರೆ. ಸಮಸ್ತ ಮಂಜೇಶ್ವರ ಮಂಡಲ ನೇತಾರರ ಸಹಿತ ಹಲವಾರು ಧಾರ್ಮಿಕ ಸಾಮಾಜಿಕ ರಾಜಕೀಯ ನೆತಾರರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ, ಅಬೂಬಕರ್ ರೋಯಲ್ ಬೊಳ್ಳಾರ್,ಹಾರುಲ್ ಅಸ್ಸನಿ, ಪ್ರಾಂಶುಪಾಲ ಮೊಹಮ್ಮದ್ ಖಾಸಿಮಿ, ಮುಹಮ್ಮದ್ ಹನೀಫ್ ಗೋಲ್ಡ್ ಕಿಂಗ್ ಉಪಸ್ಥಿತರಿದ್ದು ಮಾತನಾಡಿದರು.


