ಕುಂಬಳೆ: ಬಾಲ್ಯದಲ್ಲಿಯೇ ನಾವು ಸಮಾಜಮುಖೀ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕಷ್ಟದಲ್ಲಿರುವವರ ನೋವನ್ನು ಅರಿಯುವ ಮನಸ್ಸಿರಬೇಕು ಎಂದು ಸಮಾಜಸೇವಕ, ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು.
ಕುಂಬಳೆಯ ಕಾಲೇಜ್ ಅಪ್ಲೈಡ್ ಸಯನ್ಸ್ ಮಂಜೇಶ್ವರ 2024-25ನೇ ಸಾಲಿನ ಕಾಲೇಜ್ ಯೂನಿಯನ್ "ವಿವೇಕಾ" ದ ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿರೂರು ದುರಂತದಲ್ಲಿ ಮೃತಪಟ್ಟ ಕೇರಳದ ಲಾರಿಚಾಲಕ, ಹಾಗೂ ಇನ್ನಿತರೆಡೆಗಳಲ್ಲಿ ನಡೆದ ರಕ್ಷಣಾ ಕಾರ್ಯದ ಕುರಿತು ತಮ್ಮ ಅನುಭವಗಳನ್ನು ವರು ಹಂಚಿಕೊಂಡರು. ಕಾಲೇಜು ಪ್ರಾಂಶುಪಾಲ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಿಮಿಕ್ರಿ ಕಲಾವಿದ, ಡಬ್ಬಿಂಗ್ ಆರ್ಟಿಸ್ಟ್, ಗಾಯಕ ಮಧುಲಾಲ್ ಕೊಯಿಲಾಂಡಿ ಫೈನ್ ಆಟ್ರ್ಸ್ ಉದ್ಘಾಟಿಸಿದರು. ಪ್ಲವರ್ಸ್ ಕಾಮಿಡಿ ಉತ್ಸವಂ ಫೇಮ್ ಸುರೇಶ್ ಯಾದವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹಿರಿಯರನ್ನು ನೋಡಿಕೊಳ್ಳುವ ಮನಸ್ಸು ಮಕ್ಕಳಲ್ಲಿ ಮೂಡಬೇಕು. ವಿದ್ಯಾರ್ಥಿ ಜೀವನದಲ್ಲಿ ಸಾಧನೆಯನ್ನು ಮಾಡಬೇಕು ಎಂದು ತಿಳಿಸಿ ಮಿಮಿಕ್ರಿ ಕಲೆ ಪ್ರದರ್ಶಿಸಿದರು. ಇಬ್ಬರು ಕಲಾವಿದರನ್ನೂ ಈ ಸಂದಭರ್Àದಲ್ಲಿ ಸನ್ಮಾನಿಸಲಾಯಿತು.
ಕಾಲೇಜು ಸುಪೆರಿಂಡೆಂಟ್ ಜೋಸ್ ನಿರಪ್ಪತ್, ನೌಕರ ಸಂಘದ ಕಾರ್ಯದರ್ಶಿ ವಿಜಯಶ್ರೀ, ಯೂನಿಯನ್ ಸ್ಟಾಫ್ ಅಡ್ವೈಸರ್ ಕಮಲಾಕ್ಷಿ, ಫೈನ್ ಆಟ್ರ್ಸ್ ಅಡ್ವೈಸರ್ ಬಬಿತಾ, ಉಪಾಧ್ಯಕ್ಷೆ ಹರ್ಷಿತಾ ಕೆ, ಸಹ ಕಾರ್ಯದರ್ಶಿ ಮನೀಷಾ ಬಿ, ಫೈನ್ ಆಟ್ರ್ಸ್ ಕಾರ್ಯದರ್ಶಿ ಶ್ರೀಜಿತಾ ಪಿ. ಜಿ., ಯುಯುಸಿ ವಿಜಿತ್, ಸ್ಪೋಟ್ರ್ಸ್ ಕ್ಯಾಪ್ಟನ್ ಅಖಿನೇಶ್ ಭಾಸ್ಕರನ್ ಉಪಸ್ಥಿತರಿದ್ದರು.
ಕಾಲೇಜು ಯೂನಿಯನ್ ಕಾರ್ಯದರ್ಶಿ ಉಷಾ ಕುಮಾರಿ ಸ್ವಾಗತಿಸಿ, ಅಧ್ಯಕ್ಷೆ ಹರ್ಷಿಣಿ ಎಸ್ ವಂದಿಸಿದರು. ದೇವಿಕಾ ರಾಜನ್ ನಿರೂಪಿಸಿದರು.

