ಸಮರಸ ಚಿತ್ರಸುದ್ದಿ: ಕಾಸರಗೋಡು ಮನ್ನಿಪಾಡಿ ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದ ನವೀಕರಣ ಸಮಿತಿಯ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭ ಆಲಂಗೋಡು ಶ್ರೀ ಧೂಮಾವತೀ ದೈವಸ್ಥಾನದ ಸಮಿತಿಯ ಅಧ್ಯಕ್ಷ ಉದಯ್ ಕುಮಾರ್ ಮನ್ನಿಪಾಡಿ, ನವೀಕರಣ ಸಮಿತಿಯ ಗೌರವಾಧ್ಯಕ್ಷ ಕುಞರಾಮ ಮಣಿಯಾಣಿ, ಅಧ್ಯಕ್ಷ ನಾರಾಯಣ ಬೋವಿಕಾನ, ಕೋಶಾಧಿಕಾರಿ ನಾಗೇಶ್ ಗಟ್ಟಿ ಉಪಸ್ಥಿತರಿದ್ದರು.


