ಕಾಸರಗೋಡು: ಸಾವಿತ್ರಿ ಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆಯ ಐದರಿಂದ ಎಂಟನೇ ತರಗತಿಯ 131 ವಿದ್ಯಾರ್ಥಿಗಳು ಮತ್ತು 10 ಸಿಬ್ಬಂದಿಗಳನ್ನು ಕಣ್ಣೂರು ಜಿಲ್ಲೆಯ ಪರಶ್ಶಿನಿ ಕಡವ್ ಸ್ನೇಕ್ ಪಾರ್ಕ್, ಪಯ್ಯಂಬಲ ಬೀಚ್, ಕಣ್ಣೂರು ಕೋಟೆ, ಲೈಟ್ ಹೌಸ್, ಅರಕ್ಕಲ್ ಮ್ಯೂಸಿಯಂ,ಮತ್ತು ವಯಲಾಪ್ರಾ ಬೀಚ್ ಸೇರಿದಂತೆ ಒಂದು ದಿನದ ಅಧ್ಯಯನ, ಮನರಂಜನಾ ಪ್ರವಾಸಗಳನ್ನು ನಡೆಸಲು ಎರಡು ಟೂರಿಸ್ಟ್ ನಾನ್-ಎಸಿ ಬಸ್ಸುಗಳನ್ನು (60 ಸೀಟುಗಳು) ಒದಗಿಸಲು ಆಸಕ್ತ ಬಸ್ ಮಾಲೀಕರು ಯಾ ಸಂಸ್ಥೆಗಳಿಂದ ಕೊಟೇಷನ್ ಆಹ್ವಾನಿಸಲಾಗಿದೆ.
ಕೊಟೇಷನ್ ಜನವರಿ 27 ರಂದು ಸಂಜೆ 3ರ ಒಳಗಾಗಿ ಕಛೇರಿಯಲ್ಲಿ ತಲುಪಿಸಬೇಕು. ಸಂಜೆ 3.30 ಕ್ಕೆ ಕೊಟೇಶನ್ ತೆರೆಯಲಾಗುವುದು. ಆಡಳಿತ ಅಧಿಕಾರಿ, ಸಾವಿತ್ರಿ ಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆ, ಕಾಸರಗೋಡು, ಕುಂಡಕುಳಿ ಎಂಬ ವಿಳಾಸಕ್ಕೆ ಕೊಟೇಶನ್ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 290922)ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

