HEALTH TIPS

ಚಾಲಕನ ನಿಗೂಢ ಸಾವು-ಸಮಗ್ರ ತನಿಖೆಗೆ ಆಗ್ರಹ

ಉಪ್ಪಳ: ಬಾಯಾರು ಗಾಳಿಯಡ್ಕ ನಿವಾಸಿ ಮುಹಮ್ಮದ್ ಆಸಿಫ್ ಸಂಶಯಾಸ್ಪದ ಸಾವು ನಡೆದು ಎರಡು ವಾರ ಕಳೆದಿದ್ದು, ಈ ವಿಚಾರದಲ್ಲಿ ನಡೆಯುತ್ತಿರುವ ತನಿಖೆ ಕೇವಲ ಪ್ರಹಸನವಾಗುತ್ತಿದೆ ಎ0ದು ಮುಹಮ್ಮದ್ ಆಸಿಫ್ ಕ್ರಿಯಾ ಸಮಿತಿ ಪದಾದಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಮಂಜೇಶ್ವರ ಠಾಣೆ ಪೆÇೀಲೀಸರು ಆರಂಭದಲ್ಲಿ ನಡೆಸಿದ ತನಿಖೆಯನ್ನು ಜಿಲ್ಲಾ ಕ್ರೈಬ್ರಾಂಚ್ ಕೈಗೆತ್ತಿಗೊಂಡಿರುವುದು ಬಿಟ್ಟರೆ ಈ ವಿಚಾರದಲ್ಲಿ ಜನಸಾಮಾನ್ಯರಿಗಿರುವ ಸಂದೇಹ ಹಾಗೂ ಗೊಂದಲಗಳಿಗೆ ಪರಿಹಾರ ಸಿಕ್ಕಿಲ್ಲ. ಯುವಕನ ಮರಣದ ಬಗ್ಗೆ ಹುಟ್ಟಿಕೊಂಡಿರುವ ಸಂಶಯ ಪರಿಹರಿಸುವಲ್ಲಿ  ತನಿಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತ್ವರಿತವಾಗಿ ತನಿಖೆ ನಡೆಸಿ ಗೊಂದಲಗಳಿಗೆ ಪರಿಹಾರ ಕಾಣಬೇಕು. ಮೇಲ್ನೋಟಕ್ಕೆ ಇದೊಂದು ಕೊಲೆ ಕೃತ್ಯವೆಂದು  ಕಂಡುಬರುತ್ತಿದ್ದು, ತನಿಖೆಯಲ್ಲಿನ ವಿಲಂಬ ಧೋರಣೆ ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗಬಹುದು. ಈ ವಿಚಾರದಲ್ಲಿ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳದೆ ಇದ್ದರೆ ಪ್ರತ್ಯಕ್ಷ ಹೋರಾಟಕ್ಕೆ ಮುಂದಗುವುದು ಅನಿವಾರ್ಯವಾಗಲಿದೆ ಎಂದು  ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ನಸೀರ್ ಕೋರಿಕ್ಕಾರ್, ವಸಂತಕುಮಾರ್, ಅಶ್ರಫ್ ಬಡಾಜೆ, ಲೋಕೇಶ ನೋಂಡ, ಅಸೀಸ್ ಕಳಾಯಿ, ಫಾರೂಕ್ ಮುನ್ನೂರು, ಮುನಾಫ್ ಗಾಳಿಯಡ್ಕ, ನೌಫಲ್ ಬಾಯಾರು ಪದವು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries