ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾಸರಗೋಡಿನ ಬಿಜೆಪಿ ಜಿಲ್ಲಾಸಮಿತಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಕಾಸರಗೋಡು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಗುರುಪ್ರಸಾದ್ ಪ್ರಭು ಅಧಿಕಾರ ವಹಿಸಿಕೊಮಡರು.
ಬಿಜೆಪಿ ಕಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್ ಸಮಾರಂಭ ಉದ್ಘಾಟಿಸಿದರು. ಮಂಡಲ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದ್ದರು.
ಉತ್ತರ ವಲಯ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಕೆ. ಸವಿತಾ ಟೀಚರ್, ಮುಖಂಡರಾದ ಸುಧಾಮ ಗೋಸಾಧ, ಎ. ಕೆ.ಕಯ್ಯರ್, ಎಂ. ಎಲ್. ಅಶ್ವಿನಿ, ವಿಜಯ ಕುಮಾರ್ ರೈ, ಎನ್. ಮಧು ಮತ್ತು ಶಿವಕೃಷ್ಣ ಭಟ್ ಉಪಸ್ಥೀತರಿದ್ದರು. ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದುರೆಪಾಡಿ ಸ್ವಾಗತಿಸಿದರು. ಶಿವಾಜಿ ಕಲಾಸಂಘದ ಅಧ್ಯಕ್ಷರಾದ ಅವಿನಾಶ್ ಕೊಲ್ಯ ಅವರು ಕಾರ್ಯಕ್ರಮ ನಿರೂಪಿಸಿದರು.




