HEALTH TIPS

ಬಿಟ್‌ಕಾಯಿನ್‌ ಪ್ರಕರಣ: ₹23.94 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಜಪ್ತಿ

 ವದೆಹಲಿ: ಬಿಟ್‌ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸಿಬಿಐ ಎರಡು ದಿನ ನಡೆಸಿದ ಶೋಧ ಕಾರ್ಯದಲ್ಲಿ ₹23.94 ಕೋಟಿಗೂ ಅಧಿಕ ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ.


ಮಂಗಳವಾರ ಮತ್ತು ಬುಧವಾರ ನಡೆದ ಶೋಧದ ವೇಳೆ, ಹಲವು ಹಾರ್ಡ್‌ವೆರ್‌ ಕ್ರಿಪ್ಟೊ ವ್ಯಾಲೆಟ್‌ಗಳು, 121 ದಾಖಲೆಗಳು, 34 ಲ್ಯಾಪ್‌ಟಾಪ್‌ ಮತ್ತು ಹಾರ್ಡ್‌ ಡಿಸ್ಕ್‌, 12 ಮೊಬೈಲ್ ಫೋನ್‌ ಮತ್ತು ಹಲವು ಇ-ಮೇಲ್ ಮತ್ತು ಮೆಸೇಜ್ ಅಪ್ಲಿಕೇಷನ್‌ ಸಂಗ್ರಹವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ, ಪುಣೆ, ನಾಂದೇಡ್‌, ಕೊಲ್ಲಾಪುರ, ಮುಂಬೈ, ಬೆಂಗಳೂರು, ಚಂಡೀಗಢ, ಮೊಹಾಲಿ, ಝಾನ್ಸಿ ಮತ್ತು ಹುಬ್ಬಳ್ಳಿ ಸೇರಿ 60 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ಈ ವೇಳೆ ಮಹತ್ವದ ಸಾಕ್ಷ್ಯಗಳ ಲಭ್ಯವಾಗಿದ್ದು, ಇದರಿಂದ ಕ್ರಿಪ್ಟೊ ವಂಚನೆಯ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries