ಕಾಸರಗೋಡು: ಎಟಿಎಂಗೆ ತುಂಬಲು ನೀಡಿದ್ದ 43.33ಲಕ್ಷ ರೂ. ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೋಯಿಕ್ಕೋಡಿನ ಸಿಎಂಎಸ್ ಇನ್ಫೋಸಿಸ್ ಕಂಪೆನಿ ಪ್ರಬಂಧಕ, ಕೋಯಿಕ್ಕೋಡಿನ ಜ್ಯೋತಿಷ್ ನೀಡಿದ ದೂರಿನ ಮೇರೆಗೆ ಕಾಸರಗೋಡು ಬಳ್ಳೂರು ಎಡಚ್ಚೇರಿ ನಿವಾಸಿ ಶರತ್‍ಕುಮಾರ್ ಶೆಟ್ಟಿ ಹಾಗೂ ಉಪ್ಪಳ ಕಯ್ಯಾರಿನ ಕೆ. ದಿವಾಕರ್ ಎಂಬವರಿಗೆ ಈ ಕೇಸು.
2024 ಜ. 1 ಹಾಗೂ ಡಿಸೆಂಬರ್ 13ರ ಮದ್ಯೆ ಎಟಿಎಂಗೆ ತುಂಬಲು ನೀಡಿದ್ದ 8538000 ರು.ಗಳಲ್ಲಿ ಎಟಿಎಂಗೆ ತುಂಬದೆ ವಂಚನೆಯೆಸಗಿದ್ದು, ಇದರಲ್ಲಿ 4205000ರೂ. ಸಂಸ್ಥೆಗೆ ವಾಪಾಸು ಮಾಡಿದ್ದರೂ, ಬಾಕಿ ಮೊತ್ತ ನೀಡದೆ ವಂಚಿಸಿರುವುದಗಿ ದೂರಿನಲ್ಲಿ ತಿಳಿಸಲಾಗಿದೆ.

