ಕಾಸರಗೋಡು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವನ್ ಸ್ಟೋಪ್ ಸೆಂಟರ್ ನಲ್ಲಿ ಒಂದು ವರ್ಷದ ಕಾಲಾವಧಿಗೆ ಸೆಂಟರ್ ಅಡ್ಮಿನಿಸ್ಟ್ರೇಟರ್ ಮತ್ತು ಕೇಸ್ ವರ್ಕರ್ ಹುದ್ದೆಗಳ ನೇಮಕಾತಿ ನಡೆಸಲಾಗುವುದು.ಕಾನೂನು ಪದವಿ,ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ,ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಸರ್ಕಾರಿ, ಎನ್.ಜಿ.ಒ ನಡೆಸುತ್ತಿರುವ ಯೋಜನೆಗಳಲ್ಲಿ ಆಡಳಿತಾತ್ಮಕ ಕ್ಷೇತ್ರದಲ್ಲಿ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಕೆಲಸದ ಅನುಭವ, ಕೌನ್ಸೆಲಿಂಗ್ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವ ಸೆಂಟರ್ ಅಡ್ಮಿನಿಸ್ಟ್ರೇಟರ್ ಹುದ್ದೆಗಿರುವ ಅರ್ಹತೆಯಾಗಿದೆ.
ಕಾನೂನು ಪದವಿ, ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಸರ್ಕಾರಿ, ಎನ್.ಜಿ.ಒ ನಡೆಸುತ್ತಿರುವ ಯೋಜನೆಗಳಲ್ಲಿ ಆಡಳಿತಾತ್ಮಕ ಕ್ಷೇತ್ರದಲ್ಲಿ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಕೆಲಸದ ಅನುಭವ ಕೇಸ್ ವರ್ಕರ್ ಹುದ್ದೆಯ ಅರ್ಹತೆಯಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟ ಮತ್ತು ಅರ್ಹತಾ ಪ್ರಮಾಣಪತ್ರದ ಸ್ವಯಂ ದೃಢೀಕೃತ ಪ್ರತಿಗಳ ಸಹಿತ ಫೆಬ್ರವರಿ 12ರಂದು ಸಂಜೆ 5 ಗಂಟೆಯೊಳಗೆ ಮಹಿಳಾ ರಕ್ಷಣಾ ಕಚೇರಿಗೆ ಸಲ್ಲಿಸಬೇಕು. ಅರ್ಜಿದಾರರು 25-40 ವರ್ಷದೊಳಗಿನ ಮಹಿಳೆಯರಾಗಿರಬೇಕು. ಕೆಲಸದ ಅನುಭವದ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(8281999065, 9446270127)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

.webp)

