ಮಂಜೇಶ್ವರ: ಬಸ್ ಪ್ರಯಾಣದ ಮಧ್ಯೆ ಪ್ರಯಾಣಿಕೆಯೊಬ್ಬರ ಚಿನ್ನಾಭರಣ, ಮೊಬೈಲ್ ಹಾಗೂ 8ಸಾವಿರ ರೂ. ನಗದು ಒಳಗೊಮಡ ಬ್ಯಾಗ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ತಮಿಳ್ನಾಡು ಮೂಲದ ಮೂವರು ಮಹಿಳೆಯರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಧುರೈ ನಿವಾಸಿ ಸುಮತಿ, ತೂತುಕುಡಿ ನಿವಾಸಿ ರಂಜಿತಾ ಹಾಗೂ ಪಾರ್ವತಿ ಬಂಧಿತರು. ಇವರು ತಮಿಳ್ನಾಡಿನಿಂದ ಕೇರಳವ ವಿವಿಧ ಪ್ರದೇಶಗಳಿಗೆ ತೆರಳಿ ಕಳವು ನಡೆಸುವ ತಂಡದ ಸದಸ್ಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಮಾಡ ನಿವಾಸಿ ತಾರಾಮಣಿ ಎಂಬವರು ಕರ್ನಾಟಕ ರಸ್ತೆಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ನಗ, ನಗದು ಮೊಬೈಲ್ ಹೊಂದಿದ ಬ್ಯಾಗ್ ಕಳವಾಗಿತ್ತು.

