ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ಪುನ: ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಬಳಿಕ ವμರ್Áವಧಿ ಜಾತ್ರೆಗೆ ಮಂಗಳವಾರ ಧ್ವಜಾರೋಹಣಗೊಂಡಿತ್ತು.
ಇದರಂಗವಾಗಿ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ, ಧ್ವಜಾರೋಹಣ, ಶ್ರೀಬಲಿ, ನವಕಾಭಿಷೇಕ ನಡೆಯಿತು. ಆರಂಭದಲ್ಲಿ ನಾರಂಪಾಡಿ ಶ್ರೀ ಉಮಾಮಹೇಶ್ವರ ಭಜನಾ ಸಮಿತಿಯಿಂದ ಭಜನೆ, ಜಿ.ಕೆ.ನಾವಡರ ಸಾರಥ್ಯದಲ್ಲಿ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಬಳಿಕ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದವಿತರಣೆ, ಅನ್ನದಾನ ನಡೆಯಿತು.
ಅಪರಾಹ್ನ ಗಿರೀಶ್ ಉಪ್ಪಿನಂಗಡಿ ಇವರಿಂದ ನಟವರ್ ಭಕ್ತಿ ಸಂಗೀತ್, ಯಕ್ಷವಿವಾಹರಿ ಬದಿಯಡ್ಕ ಇವರಿಂದ ಯಕ್ಷಗಾನ ತಾಳಮದ್ದಳೆ, ಶಿವಾಂಜಲಿ ಕಲಾಕೇಂದ್ರ ಪೆರ್ಲದ ವಿದುಷಿ ಕಾವ್ಯ ಭಟ್ ಇವರಿಂದ ಭರತನಾಟ್ಯ, ಶ್ರೀ ಶೈಲಂ ನಾರಂಪಾಡಿ ಇವರಿಂದ ಕರಗಾಟ್ಟಂ ನೃತ್ಯ ಹಾಗೂ ರಾತ್ರಿ ಪೂಜೆ, ಹವಿಸ್ಸುಪೂಜೆ, ಶ್ರೀ ಭೂತಬಲಿ ನಡೆಯಿತು.
ಇಂದು ಬುಧವಾರ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಶ್ರೀ ಬಲಿ, ಭಜನೆ, ಸುನಾದ ಸಂಗೀತ ಶಾಲೆ ಪುತ್ತೂರು, ಸುಬ್ರಹ್ಮಣ್ಯ ಕಬೆಕೋಡು ಇವರಿಂದ ಪಿಟೀಲು ವಾದನ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಅಪರಾಹ್ನ ಭರತನಾಟ್ಯ, ಶಾಸೀಯ ಸಂಗೀತ, ಸಂಜೆ ಭಜನೆ, ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀ ಭೂತಬಲಿ ನಡೆಯಲಿದೆ.

.jpg)

