ಕಾಸರಗೋಡು : ಶ್ರೀ ಪುರಂದರದಾಸ ಸಂಗೀತ ಕಲಾಮಂದಿರದ 21ನೇ ಸಂಕೀರ್ತನಾ ಆರಾಧನೋತ್ಸವ ಫೆ. 8 ಹಾಗೂ 9 ರಂದು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರಗಲಿದೆ. 8 ರಂದು ಬೆಳಿಗ್ಗೆ 8.30 ಕ್ಕೆ ಉದ್ಘಾಟನೆ ನಂತರ ಸರಸ್ವತಿ ಕೃಷ್ಣನ್ ಮತ್ತು ಬಳಗ, ಕೆರೆಮನೆ ಶ್ರೀ ಮನಮೋಹನ ಮತ್ತು ಬಳಗ ಇವರಿಂದ ಕೊಳಲು ವಾದನ, ಯೋಗೀಶ್ ಶರ್ಮ ಬಳ್ಳಪದವು ಮತ್ತು ಬಳಗ, ಉಷಾ ಈಶ್ವರ ಭಟ್ ಮತ್ತು ಬಳಗ ಇವರಿಂದ ಹಾಗೂ ರಮ್ಯಾ ನಂಬೂದಿರಿ ಇವರಿಂದ ಹಾಡುಗಾರಿಕೆ ನಡೆಯುವುದು.
ಮಧ್ಯಾಹ್ನ 1.30 ರಿಂದ ಕೋಳಿಕಜೆ ಬಾಲಸುಬ್ರಹ್ಮಣ್ಯ ಭಟ್ ಮತ್ತು ಬಳಗ, ಡಾ. ಹೇಮಶ್ರೀ ಮತ್ತು ಕು| ಶ್ರೀವಾಣಿ, ಶ್ರೀಮತಿ ರಾಧಾ ಮುರಳೀಧರ ಇವರಿಂದ ಮತ್ತು ಸಂಜೆ 4 ರಿಂದ ವೀಕ್ಷಣ್ ಉಡುಪಿ, ರಂಜಿನಿ ಪಿ.ವಿ ಇವರಿಂದ ಹಾಡುಗಾರಿಕೆ 5.30 ರಿಂದ ವೀಣಾ ವಯಲಿನ್ ದ್ವಂದ್ವ ಕಛೇರಿ ನಡೆಯುವುದು.
9 ರಂದು ಬೆಳಿಗ್ಗೆ 8.30 ಕ್ಕೆ ಪಂಚರತ್ನ ಕೀರ್ತನೆ ಮತ್ತು ಉತ್ಸವ ಸಂಪ್ರದಾಯ ಕೀರ್ತನಾರ್ಚನೆ, 10.30 ರಿಂದ ಸಂಗೀತ ಸೇವೆ ನಡೆಯುವುದು. ಮಧ್ಯಾಹ್ನ 3.30 ಕ್ಕೆ ನಡೆಯುವ ಗೌರಾರ್ಪಣೆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಈಶ್ವರ ಭಟ್ ವಿದ್ಯಾನಗರ ಮತ್ತು ಚಿತ್ರನಟ ಶ್ರೀನಿವಾಸ (ಕಾಸರಗೋಡು ಚಿನ್ನ)ಅವರಿಗೆ ಸನ್ಮಾನ ನಡೆಯುವುದು. ಸಂಜೆ 4.30 ಕ್ಕೆ ವಿದ್ವಾನ್ ಚೇರ್ತಲ ಕೆ.ಎನ್. ರಂಗನಾಥ ಶರ್ಮ ಇವರಿಂದ "ಹಾಡುಗಾರಿಕೆ ಕಛೇರಿ" ನಡೆಯಲಿದೆ.

