HEALTH TIPS

ಸಿಂಗಪುರ: ವಿಪಕ್ಷ ನಾಯಕ ಪ್ರೀತಂ ಸಿಂಗ್‌ ಸಂಸತ್ತಿಗೆ ಸುಳ್ಳು ಹೇಳಿದ್ದು ದೃಢ

ಸಿಂಗಪುರ: ಸಂಸದೀಯ ಸಮಿತಿಗೆ ಸುಳ್ಳು ಹೇಳಿರುವ ಎರಡು ಪ್ರಕರಣಗಳಲ್ಲಿ ಭಾರತೀಯ ಮೂಲದ ಸಿಂಗಪುರ ಸಂಸತ್ತಿನ ವಿರೋಧ ಪಕ್ಷದ ನಾಯಕ ಪ್ರೀತಂ ಸಿಂಗ್ ಅವರು ತಪ್ಪಿತಸ್ಥರೆಂದು ನ್ಯಾಯಾಲಯವು ಇಂದು (ಸೋಮವಾರ) ತೀರ್ಪು ನೀಡಿದೆ. 

48 ವರ್ಷದ ಸಿಂಗ್ ವಿರುದ್ಧ ಶಿಕ್ಷೆ ಇಂದು ಪ್ರಕಟವಾಗಲಿದೆ.

ಎರಡು ಪ್ರಕರಣಗಳಲ್ಲಿ ತಲಾ ₹4.5 ಲಕ್ಷ ದಂಡ ವಿಧಿಸಿದರು.

ತೀರ್ಪು ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ, ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

ಯಾವುದೇ ಪ್ರಕರಣದಲ್ಲಿ ಸಂಸದರು ಕನಿಷ್ಠ ಒಂದು ವರ್ಷ ಜೈಲು ಅಥವಾ ಕನಿಷ್ಠ ₹ 6.50 ಲಕ್ಷ (ಒಂದು ಅಪರಾಧಕ್ಕೆ ಸಂಬಂಧಿಸಿದಂತೆ) ದಂಡಕ್ಕೆ ಗುರಿಯಾದರೆ ಅವರ ಸಂಸತ್‌ ಸದಸ್ಯತ್ವ ರದ್ದಾಗುತ್ತದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ ಎಂದು ನಿಯಮ ಹೇಳುತ್ತದೆ.

ಆದರೆ, ಸಿಂಗ್‌ ಅವರಿಗೆ ವಿಧಿಸಿರುವ ಶಿಕ್ಷೆಯು ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸುವ ಮಿತಿಯನ್ನು ತಲುಪುವುದಿಲ್ಲ ಎಂದು ಚುನಾವಣಾ ಆಯೋಗ ಸೋಮವಾರ ದೃಢಪಡಿಸಿದೆ.

'ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನು ತಂಡಕ್ಕೆ ಸೂಚಿಸಿದ್ದೇನೆ' ಎಂದು ಸಿಂಗಪುರ ಸಂಸತ್‌ನಲ್ಲಿ ವಿಪಕ್ಷ ಸ್ಥಾನದಲ್ಲಿರುವ ವರ್ಕರ್ಸ್‌ ಪಾರ್ಟಿ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಂಗ್‌ ಅವರು ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

2021ರಲ್ಲಿ ತಮ್ಮದೇ ಪಕ್ಷದ ಮಾಜಿ ಸಂಸದೆ ರಯೀಸಾ ಖಾನ್‌ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸಂಸದೀಯ ಸಮಿತಿಗೆ ಸುಳ್ಳು ಸಾಕ್ಷ್ಯ ನೀಡಿದ ಎರಡು ಆರೋಪಗಳು ಸಿಂಗ್‌ ಮೇಲಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries