ವಯಸ್ಸಾಗುವುದು ತುಂಬಾ ಸಾಮಾನ್ಯ. ಆದರೆ, ನಮ್ಮ ದೇಹವು ವೃದ್ಧಾಪ್ಯದತ್ತ ಸಾಗಿದಾಗ ಅದರ ಪರಿಣಾಮ ಮೊದಲು ನಮ್ಮ ದೇಹದ ಇತರ ಅಂಗಗಳ ಮೇಲೆ ಪ್ರಭಾವಿಸುತ್ತದೆ. ಒಂದು ನಿರ್ದಿಷ್ಟ ವಯಸ್ಸಿನ ನಂತ್ರ ಇದು ಆರಂಭವಾಗುತ್ತದೆ. ಇದರಿಂದ ವಯಸ್ಸಾಗುವಿಕೆಯ ಲಕ್ಷಣಗಳು ಗೋಚರಿಸುತ್ತದೆ.
Senior sad man leans on a cane while sitting on sofa
ವಯಸ್ಸಾಗುವಿಕೆಯ ಲಕ್ಷಣಗಳು; ವಯಸ್ಸಾಗುವಿಕೆ ಎಲ್ಲರಿಗೂ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ.ಆದರೆ, ಕೆಲವೊಮ್ಮೆ ಇತರ ಕಾರಣಗಳಿಂಣದಲೂ ದೇಹವು ಬೇಗ ವಯಸ್ಸಾದಂತೆ ಕಾಣುತ್ತದೆ. ಇವುಗಳಲ್ಲಿ ಮಾನಸಿಕ ಒತ್ತಡ, ಕಳಪೆ ಆಹಾರ, ಹಾರ್ಮೋನ್ ಅಸಮತೋಲನ ಮತ್ತು ಪರಿಸರ ಸೇರಿವೆ.
ವೃದ್ಧಾಪ್ಯ ಬರುವ ಮೊದಲೇ ಹಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೆಲವು ಅಂಗಗಳು ಮೊದಲು ಮತ್ತು ವೇಗವಾಗಿ ವಯಸ್ಸಾಗುತ್ತವೆ, ಆದ್ದರಿಂದ ಅವುಗಳಲ್ಲಿ ವಯಸ್ಸಾಗುವಿಕೆಯ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ವಯಸ್ಸಾಗುವಿಕೆ ಪರಿಣಾಮಗಳು ಮೊದಲು ಯಾವ ಅಂಗಗಳ ಮೇಲೆ ಕಂಡುಬರುತ್ತವೆ ಎಂಬುವುದನ್ನು ನೋಡೋಣ.

ಮೊಣಕಾಲು: ವಯಸ್ಸಾಗುವಿಕೆ ಬಗ್ಗೆ ನಮ್ಮ ಮೊಣಕಾಲುಗಳ ನೋವು(ಮಂಡಿ ನೋವು) ಮೊದಲ ಸೂಚನೆ. ಹೌದು, ವಯಸ್ಸಾದಂತೆ, ಮೊಣಕಾಲುಗಳ ತೇವಾಂಶ ಕ್ಷೀಣಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ನೋವು ಹೆಚ್ಚಾಗುತ್ತದೆ ಮತ್ತು ನಡೆಯುವಾಗ ಮೊಣಕಾಲುಗಳು ಬಿರುಕು ಬಿಡುವ ಶಬ್ದ ಬರಲು ಪ್ರಾರಂಭಿಸುತ್ತದೆ. ನೀವು ಅಂತಹ ಲಕ್ಷಣಗಳನ್ನು ನೋಡಿದಾಗ,ನಿಮ್ಮ ವಯಸ್ಸು ಈಗ ವೃದ್ಧಾಪ್ಯದತ್ತ ಸಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಿ.
ಕಣ್ಣುಗಳ ಸುತ್ತಲಿನ ಪ್ರದೇಶ: ನಮಗೆ ವಯಸ್ಸಾಗಲು ಪ್ರಾರಂಭಿಸಿದಾಗ, ನಮ್ಮ ಕಣ್ಣುಗಳ ಸುತ್ತಲಿನ ಚರ್ಮವು ಸಡಿಲಗೊಳ್ಳಲು ಮತ್ತು ಕುಗ್ಗಲು ಪ್ರಾರಂಭಿಸುತ್ತದೆ ಮತ್ತು ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಕುತ್ತಿಗೆ: ಕುತ್ತಿಗೆ ಎಂದರೆ ವೃದ್ಧಾಪ್ಯದ ಲಕ್ಷಣಗಳು ಮೊದಲು ಗೋಚರಿಸುವ ದೇಹದ ಭಾಗ. ಈ ಅಂಗದ ಚರ್ಮವು ತೆಳ್ಳಗಿರುವುದರಿಂದ ವಯಸ್ಸಾದಂತೆ, ಕತ್ತಿನ ಚರ್ಮವು ಸಡಿಲವಾಗುತ್ತದೆ ಮತ್ತು ಜೋತು ಬೀಳುತ್ತದೆ.
ಎದೆಭಾಗ: ಸಂಶೋಧನೆ ಪ್ರಕಾರ, ಮಹಿಳೆಯರ ಸ್ತನಗಳು ಮತ್ತು ಪುರುಷರ ಎದೆಯ ಭಾಗ ದೇಹದ ಉಳಿದ ಭಾಗಗಳಿಗಿಂತ 2-3 ವರ್ಷ ಹಳೆ ಹಳೆಯದಾಗಿದೆ. ಹೀಗಾಗಿ, ವಯಸ್ಸಾದಂತೆ ಮಹಿಳೆಯ ವೃದ್ಧಾಪ್ಯದ ಸೂಚನೆಗಳು ಮೊದಲು ಸ್ತನದ ಮೇಲೆ ಕಂಡು ಬರುತ್ತದೆ. ಹೀಗಾಗಿ, ವಯಸ್ಸಾದಂತೆ ಸ್ತನಗಳು ಸಡಿಲವಾಗಿ ಜೋತು ಬೀಳುತ್ತದೆ.




