ದಿನನಿತ್ಯ ವಿವಿಧ ರೀತಿಯ ಹಣಕಾಸು ವಂಚನೆಗಳು ಬೆಳಕಿಗೆ ಬರುತ್ತಿವೆ. ಈಗ, ಅಧಿಕಾರಿಗಳು ಹೊಸ ಹಗರಣದ ಕುರಿತು ಎಚ್ಚರಿಕೆ ನೀಡಿದ್ದಾರೆ. ವಂಚಕರು ಗ್ರಾಹಕರ ಅರಿವಿಲ್ಲದೆ ಪೋನ್ ಕರೆಗಳನ್ನು ಸಂಪರ್ಕಿಸಬಹುದು ಮತ್ತು ಒಟಿಟಿಯನ್ನು ಕದಿಯಬಹುದು. ಇದು ವಂಚಕರಿಗೆವಹಿವಾಟುಗಳನ್ನು ಪೂರ್ಣಗೊಳಿಸಲು ಮತ್ತು ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ.
ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಲಾಗಿದೆ.
'ವಂಚಕರು ನಿಮ್ಮ ಒಟಿಪಿ ನೀಡುವಂತೆ ನಿಮ್ಮನ್ನು ಮೋಸಗೊಳಿಸಲು ಕರೆಮಾಡಿ ವಿವಿಧ ತಂತ್ರಗಳನ್ನು ಬಳಸುತ್ತಾರೆ.' ಅದಕ್ಕೆ ಬಲಿಯಾಗಬೇಡಿ! ಜಾಗರೂಕರಾಗಿರಿ ಮತ್ತು ಹಣವನ್ನು ಉಳಿಸಿ.' ಇದು ಯುಪಿಐ ನೀಡಿದ ಎಚ್ಚರಿಕೆ.
ಹಗರಣ ರೀತಿ ಏನು?
ಒಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಸ್ನೇಹಿತರಿಂದ ನಿಮ್ಮ ಸಂಖ್ಯೆಯನ್ನು ಪಡೆದಿರುವುದಾಗಿ ಹೇಳಿಕೊಳ್ಳುತ್ತಾನೆ. ಆ ಸ್ನೇಹಿತ ಬೇರೆ ಸಂಖ್ಯೆಯಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿ ಕರೆಯನ್ನು ವಿಲೀನಗೊಳಿಸಬಹುದೇ ಎಂದು ಕೇಳುತ್ತಾನೆ. ಆದರೆ ಅದು ಗ್ರಾಹಕರ ಬ್ಯಾಂಕಿನಿಂದ ಬರುವ ಒಟಿಪಿ ಪೋನ್ ಕರೆಯಾಗಿರುತ್ತದೆ. ಕರೆ ವಿಲೀನವು ಒಂದೇ ಸಮಯದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಮಾತನಾಡಲು ಅನುವು ಮಾಡಿಕೊಡುತ್ತದೆ. ಒಬ್ಬರನ್ನೊಬ್ಬರು ಕೇಳಿಸಿಕೊಳ್ಳಬಹುದಾಗಿರುತ್ತದೆ. ಇದರರ್ಥ ವಂಚಕನು ಬ್ಯಾಂಕಿನಿಂದ ಪೋನ್ ಕರೆಯ ಸಮಯದಲ್ಲಿ ಮಾತನಾಡುವ ಒಟಿಪಿ ಕೇಳಬಹುದು. ಆ ಕ್ಷಣದಲ್ಲೇ ವಂಚಕರು ಈ ಒಟಿಪಿ ಬಳಸಿ ಹಣದ ವಹಿವಾಟು ನಡೆಸಬಹುದು.
ಸುರಕ್ಷಿತವಾಗಿರುವುದು ಹೇಗೆ?:.
ಪರಿಚಯವಿಲ್ಲದ ಸಂಖ್ಯೆಗಳೊಂದಿಗೆ ಕರೆಗಳನ್ನು ವಿಲೀನಗೊಳಿಸಬೇಡಿ. ಯಾರಾದರೂ ಕರೆಗಳನ್ನು ವಿಲೀನಗೊಳಿಸಲು ಕೇಳಿದರೆ ಅನುಮಾನಾಸ್ಪದರಾಗಿರಿ. ವಿಶೇಷವಾಗಿ ಅಪರಿಚಿತರು ಕರೆ ಮಾಡಿದರೆ.
ಕರೆ ಮಾಡುತ್ತಿರುವವರು ಯಾರು ಎಂಬುದನ್ನು ಪರಿಶೀಲಿಸಿ - ಯಾರಾದರೂ ನಿಮ್ಮ ಬ್ಯಾಂಕಿನವರು ಮತ್ತು ನಿಮಗೆ ಪರಿಚಿತರು ಎಂದು ಹೇಳಿಕೊಂಡು ನಿಮಗೆ ಕರೆ ಮಾಡಿದರೂ ಸಹ, ನೀವು ಅವರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು.
ವಹಿವಾಟು ನಡೆಸದೆ ನೀವು ಒಟಿಪಿ ಸ್ವೀಕರಿಸಿದರೆ, ಅದನ್ನು ವರದಿ ಮಾಡಿ. ಇದಕ್ಕಾಗಿ ನೀವು 1930 ಗೆ ಕರೆ ಮಾಡಿ ಅಧಿಕೃತರನ್ನು ಸಂಪರ್ಕಿಸಬಹುದು.






