ತಿರುವನಂತಪುರಂ: ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡುವುದು ಮತ್ತು ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗೆ ಹೆಚ್ಚಿಸುವುದರಿಂದ ಕೇರಳಕ್ಕೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿರುವರು.
ಮೂಲಸೌಕರ್ಯ ಅಭಿವೃದ್ಧಿಗಾಗಿ ಬಡ್ಡಿರಹಿತ ಸಾಲಗಳನ್ನು 50 ವರ್ಷಗಳ ಅವಧಿಗೆ ನೀಡಲಾಗುತ್ತದೆ. ಇದಕ್ಕಾಗಿ ಒಂದೂವರೆ ಲಕ್ಷ ಕೋಟಿ ಮೀಸಲಿಡಲಾಗಿದೆ. ವಿಳಿಂಜಂ ಸೇರಿದಂತೆ ಯೋಜನೆಗಳಿಗೆ ಬಡ್ಡಿರಹಿತ ಸಾಲ ಪಡೆಯಬಹುದು. ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿರುವುದು ಒಳ್ಳೆಯದೇ ಆದರೂ, ಸ್ಲ್ಯಾಬ್‍ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇರಳಕ್ಕೆ ನ್ಯಾಯಯುತವಾದ ಪರಿಗಣನೆ ಸಿಗಲಿಲ್ಲ. ಕೇಂದ್ರವು ರಾಜ್ಯ ಸರ್ಕಾರಗಳನ್ನು ಸಮಾನವಾಗಿ ಪರಿಗಣಿಸುವುದಿಲ್ಲ. ವಯನಾಡ್ ವಿಪತ್ತು ಪ್ಯಾಕೇಜ್ ಬಗ್ಗೆ ಏನನ್ನೂ ಹೇಳಲಾಗಿಲ್ಲ. ವಿಳಿಂಜಂಗೆ ಯಾವುದೇ ಹಂಚಿಕೆ ಇಲ್ಲ ಎಂದು ಹಣಕಾಸು ಸಚಿವರು ಪ್ರತಿಕ್ರಿಯಿಸಿರುವರು.





