ಮಂಜೇಶ್ವರ: ಉದ್ಯಾವರ ತೋಟ ಜಿ.ಎಂ.ಎಲ್.ಪಿ ಶಾಲೆಯಲ್ಲಿ ದಿನ ವೇತನ ಆಧಾರದಲ್ಲಿ ಸೇವೆಗೈದು ಇದೀಗ ಸರ್ಕಾರಿ ಉದ್ಯೋಗ ಲಭಿಸಿದ ಐಶ್ವರ್ಯ ಉಪ್ಪಳ ಇವರಿಗೆ ಮಂಗಳೂರು ಪಿಲಿಕುಳ ಮಾನಸ ವಾಟರ್ ಪಾರ್ಕಿನಲ್ಲಿ ಅಭಿನಂದನಾ ಸಭೆ ಗುರುವಾರ ನಡೆಯಿತು. ಸಭೆಯ ಆಧ್ಯಕ್ಷತೆಯನ್ನು ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಸಮೀನಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಮೀಯಪದವು ಜಿ.ಎಲ್.ಪಿ.ಶಾಲೆ ಮುಳಿಂಜದಲ್ಲಿ ಸೇವೆಗೆ ಸೇರಿದ ಐಶ್ವರ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಶುಭಾಶಂಸನೆಗೈದರು. ತೋಟ ಶಾಲೆಯ ಹಿರಿಯ ಶಿಕ್ಷಕ ರವಿಶಂಕರ ನೆಗಲಗುಳಿ ಸ್ವಾಗತಿಸಿ, ಗಾಯತ್ರಿ ಟೀಚರ್ ವಂದಿಸಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಂಡ ಅಧ್ಯಾಪಕರಾದ ರಿಯಾಸ್‍ವಾಫಿ, ಅಬ್ದುಲ್ ಬಶೀರ್, ಧನ್ಯ, ಫಝೀನ, ಕಾವ್ಯ, ಶಾರಿ ಹಾಗೂ ಮಕ್ಕಳು ಪಾಲ್ಗೊಂಡರು.




.jpg)

