ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಐದನೇ ದಿನ ಬೆಳಗ್ಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರತತ್ವ ಹೋಮ, ತತ್ತ್ವ ಕಲಶಪೂಜೆ, ಕುಂಭೇಶ ಕರ್ಕರಿ, ಶಯ್ಯಾಪೂಜೆ, ತತ್ತ್ವಕಲಶಾಭಿಷೇಕ, ಜೀವಕಲಶಪೂಜೆ, ಜೀವೋದ್ವಾಸನೆ, ಶಯ್ಯೋನ್ನಯನ, ಅಂಕುರ ಪೂಜೆ, ಮಹಾಪೂಜೆ ನಡೆಯಿತು. ಸಂಜೆ ಬಿಂಬಶುದ್ಧಿ, ಕಲಶಾಭಿಷೇಕ, ಪೀಠಾಧಿವಾಸ, ಧ್ಯಾನಧಿವಾಸ, ಅಧಿವಾಸ ಹೋಮ, ಅಧಿವಾಸ ಬಲಿ, ತ್ರಿಕಾಲ ಪೂಜೆ, ಶಿರಸ್ತತ್ವ ಹೋಮ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮಹಾಪೂಜೆ ನಡೆಯಿತು.
ಭಜನಾಮಂಟಪದಲ್ಲಿ ಭಜನಾ ಝೇಂಕಾರ :
ಬ್ರಹ್ಮಕಲಶಾಭಿಷೇಕದ ಪ್ರಾರಂಭದ ದಿನದಿಂದ ಶ್ರೀ ಕ್ಷೇತ್ರದ ಮುಂಭಾಗದಲ್ಲಿರುವ ಭಜನಾಮಂಟಪದಲ್ಲಿ ನಡೆಯುತ್ತಿರುವ ಭಜನಾಸೇವೆಯು ಭಗವದ್ಭಕ್ತರನ್ನು ಭಕ್ತಿಭಾವಗಳಲ್ಲಿ ತಲ್ಲೀನರಾಗುವಂತೆ ಮಾಡುತ್ತದೆ. ಗುರುವಾರ ಶ್ರೀ ಮೂಕಾಂಬಿಕಾ ಭಜನಾ ಸಂಘ ನೆಲ್ಯಡ್ಕ, ಶ್ರೀ ಭಾರತಾಂಬಾ ಭಜನ ಸಂಘ ಗಾಡಿಗುಡ್ಡೆ, ಶ್ರೀ ಮಹಿಷಮರ್ಧಿನಿ ಭಜನ ಸಂಘ ಗೋಸಾಡ, ಶ್ರೀ ಶಾರದಾಂಬಾ ಭಜನ ಸಂಘ ಕೈತೋಡು ಆದೂರು, ಶ್ರೀ ವಿಶ್ವಕರ್ಮ ಭಜನ ಸಂಘ ಮವ್ವಾರು ಭಜನಾ ಸೇವೆ ನಡೆಸಿಕೊಟ್ಟರು.
ಉಮಾಮಹೇಶ್ವರ ಸಾಂಸ್ಕøತಿಕ ವೇದಿಕೆ :
ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಡಾ. ಹೇಮಶ್ರೀ ಮತ್ತು ಕುಮಾರಿ ಶ್ರೀವಾಣಿ ಕಾಕುಂಜೆ ಹಾಗೂ ಕುಮಾರಿ ಶ್ರೀವರದಾ ಪಟ್ಟಾಜೆ ಇವರಿಂದ ಶಾಸ್ತ್ರೀಯ ಸಂಗೀತ, ಸುಂದರ ಎ.ಕೆ. ಮತ್ತು ಬಳಗ ಕಡೆಯಂಗೋಡು ಇವರಿಂದ ಭಕ್ತಿ ಸಂಗೀತ, ಕುಮಾರಿ ಧನ್ಯಶ್ರೀ ಎನ್.ಎಸ್. ಪಡಾರು ಮತ್ತು ಬಳಗದವರಿಂದ ಹರಿಕಥಾ ಸತ್ಸಂಗ, ಸಂಜೆ ಆಶ್ವಿಜಾ ಉಡುಪ ಮತ್ತು ಶೋಭಿತಾ ಭಟ್ ಕಿನ್ನಿಗೋಳಿ ಹಾಗೂ ವಿದುಷಿ ಉಷಾ ಈಶ್ವರ ಭಟ್ ಮತ್ತು ಬಳಗ ಕಾಸರಗೋಡು ಇವರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಗಂಗಾಧರ ರೈ ಮಠದಮೂಲೆ ನೇತೃತ್ವದಲ್ಲಿ ಕಾರ್ಯಕ್ರಮ ನಿರೂಪಣೆ ನಡೆಯಿತು.
ಇಂದು ಶುಕ್ರವಾರ 108 ತೆಂಗಿನ ಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಪೂರ್ವಾಹ್ನ 9.55ರಿಂದ 10.39ರ ಮೀನಲಗ್ನದಲ್ಲಿ ಶ್ರೀ ಉಮಾಮಹೇಶ್ವರ ಮತ್ತು ಸಪರಿವಾರ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ, ಅಂಕುರ ಪೂಜೆ ಮಹಾಪೂಜೆ ನಡೆಯಲಿದೆ.




.jpg)
.jpg)
.jpg)

