ಕಾಸರಗೋಡು: ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ದೇವಸ್ಥಾನದಿಂದ ಶಬರಿಮಲೆ ಯಾತ್ರೆಗೆ ಮುದ್ರಧಾರಣೆಗೈದು ತೀರ್ಥಯಾತ್ರೆ ತೆರಳಿದ ಜಯರಾಮ ಗುರುಸ್ವಾಮಿ ಶಿಷ್ಯವೃಂದದವರಿಂದ ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ, ಸಾಮಾಜಿಕ, ಕ್ರೀಡೆಗೆ ಹಲವು ಮಜಲುಗಳಲ್ಲಿ 40 ವರ್ಷಗಳಿಗಿಂತ ಹೆಚ್ಚು ಕಾಲ ದುಡಿಯುತ್ತಿರುವ ಇತ್ತೀಚೆಗೆ ಚೆನ್ನೈಯಲ್ಲಿ ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪಡೆದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಇವರನ್ನು ಶ್ರೀ ಕ್ಷೇತ್ರದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಮೊಕ್ತೇಸರ ಪುರುಷೋತ್ತಮ ಧರೇಕರ್, ವಿಶ್ವನಾಥ ಕೊರಕ್ಕೋಡು, ನವೀನ ಕೊರಕ್ಕೋಡು ಹಾಗೂ ಗುರುಸ್ವಾಮಿಗಳು ಅಯ್ಯಪ್ಪ ವ್ರತಧಾರಿಗಳು ಉಪಸ್ಥಿತರಿದ್ದರು.






