ಎರ್ನಾಕುಳಂ: ಯುವ ನಟಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಟ ಸಿದ್ದಿಕ್ ತಪ್ಪಿತಸ್ಥ ಎಂದು ಪೋಲೀಸರು ಘೋಷಿಸಿದ್ದಾರೆ. ವಿಶೇಷ ತನಿಖಾ ತಂಡವು ಸಿದ್ದಿಕ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಭರವಸೆ ನೀಡಿ, ದುರುದ್ದೇಶಪೂರ್ವಕವಾಗಿ ಅವರನ್ನು ಹೋಟೆಲ್‍ಗೆ ಆಹ್ವಾನಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಹೇಮಾ ಸಮಿತಿ ವರದಿ ಬಿಡುಗಡೆಯಾಗುವ ಮೊದಲೇ ಮಹಿಳೆ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸಿದ್ದಾಳೆ ಎಂದು ತನಿಖಾ ತಂಡವು ಪತ್ತೆಮಾಡಿದೆ. ವಿಶೇಷ ತನಿಖಾ ತಂಡದ ವರದಿಯು ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಸಾಬೀತುಪಡಿಸುತ್ತದೆ.
ತಿರುವನಂತಪುರಂನ ಮಸ್ಕತ್ ಹೋಟೆಲ್‍ನಲ್ಲಿ ಜನವರಿ 27, 2016 ರಂದು ಅತ್ಯಾಚಾರ ನಡೆದಿತ್ತು. 'ಸುಖಮಾಯಕಟ್ಟೆ' ಚಿತ್ರದ ಪೂರ್ವವೀಕ್ಷಣೆಗೆ ಬಂದಿದ್ದ ನಟಿಯನ್ನು ಸಿದ್ದಿಕ್ ಹೋಟೆಲ್‍ಗೆ ಆಹ್ವಾನಿಸಿದ್ದರು. ಸಿದ್ದಿಕ್ ಮಸ್ಕತ್ ಹೋಟೆಲ್‍ನಲ್ಲಿ ತಂಗಿದ್ದರು ಎಂಬುದಕ್ಕೆ ಸಾಕ್ಷಿಗಳ ಹೇಳಿಕೆಗಳು ಮತ್ತು ಡಿಜಿಟಲ್ ಪುರಾವೆಗಳಿವೆ. ಅಪರಾಧ ನಡೆದಾಗ ಮಹಿಳೆಯ ಜೊತೆ ಆಕೆಯ ಕುಟುಂಬ ಮತ್ತು ಸ್ನೇಹಿತ ಇದ್ದರು.
ಅಪರಾಧ ನಡೆದ ಸಮಯದಲ್ಲಿ ಬಳಸಿದ ಮೊಬೈಲ್ ಪೋನ್ ಅನ್ನು ನೀಡುವಂತೆ ಕೇಳಿಕೊಂಡರೂ, ಸಿದ್ದಿಕ್ ಹಿಂತಿರುಗಿಸಿಲ್ಲ. ಆದರೆ ದೂರುದಾರರು ಒದಗಿಸಿದ ಡಿಜಿಟಲ್ ಪುರಾವೆಗಳು ನಿರ್ಣಾಯಕವೆಂದು ಸಾಬೀತಾಗಿದೆ.
ಮಹಿಳೆ ಆರೋಪ ಮಾಡಿರುವ ಫೇಸ್‍ಬುಕ್ ಪೋಸ್ಟ್‍ಗಳಲ್ಲಿ ತನ್ನ ಹೆಸರಿಲ್ಲ ಎಂದು ಸಿದ್ದಿಕ್ ಹೇಳಿದ್ದರು. ಅತ್ಯಾಚಾರಕ್ಕೊಳಗಾದ ನಂತರ ಮಹಿಳೆ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಳು. ಆ ದಿನ ಆಕೆ ವೈದ್ಯರಿಗೆ ದೌರ್ಜನ್ಯದ ಬಗ್ಗೆ ಹೇಳಿದ್ದಳು ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.






