ಕಾಸರಗೋಡು: ಮಾಲಿನ್ಯಮುಕ್ತ ನವಕೇರಳ ಯೋಜನೆಯನ್ವಯ ಹಸಿರು ಕ್ರಾಂತಿಗಾಗಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಸ್ನೇಹಿ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಹಸಿರು ಘೋಷಣೆಗಳ ಮೂಲಕ ಕಾಸರಗೋಡು ಜಿಲ್ಲೆಯನ್ನು ಕ್ರಾಂತಿಕಾರಿ ಬದಲಾವಣೆಯತ್ತ ಕೊಂಡೊಯ್ಯಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಮಡಿದೆ. 2,400 ಹಸಿರು ಸಂಸ್ಥೆಗಳು, 12024 ಹಸಿರು ನೆರೆಹೊರೆ ಗುಂಪುಗಳು, ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕಗಳು, ಹಸಿರು ಕಾಲೇಜು, ಹಸಿರು ಪ್ರವಾಸೋದ್ಯಮ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. 2,400 ಹಸಿರು ಸ್ನೇಹಿ ಸಂಸ್ಥೆಗಳು, 636 ಹಸಿರು ಶಾಲೆಗಳು, 64 ಹಸಿರು ಕಾಲೇಜುಗಳು, ಹಸಿರು ಕೇರಳ ಮಿಷನ್, ಶುಚಿತ್ವ ಮಿಷನ್, ಕುಟುಂಬಶ್ರೀ ಮತ್ತು ಸ್ಥಳೀಯ ಸ್ವ-ಸರ್ಕಾರಗಳ ಸಂಘಟಿತ ಚಟುವಟಿಕೆಗಳನ್ನು ಪರಿಣಾಮವಾಗಿ ಜಾರಿಗೊಳಿಸಲಾಗುತ್ತಿದೆ. ಯೋಜನೆಯನ್ವಯ 636 ಹಸಿರು ಶಾಲೆಗಳು, 64 ಹಸಿರು ಕಾಲೇಜುಗಳು, 21 ಹಸಿರು ನಗರಗ ಮತ್ತು 88 ಸ್ವಚ್ಛ ಸಾರ್ವಜನಿಕ ಸ್ಥಳಗಳನ್ನು ಈಗಾಗಲೇ ಘೋಷಿಸಲಾಗಿದೆ.
ಯೋಜನೆಯನ್ವಯ 12,175 ನೆರೆಹೊರೆ ಕೂಟಗಳಲ್ಲಿ, 12,169 ಗ್ರೀನ್ ಗ್ರೇಡಿಂಗ್‍ಗೆ ಒಳಪಟ್ಟಿದ್ದರೆ, 12,024 ನೆರೆಹೊರೆಗಳು ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದೆ. ಪರಪ್ಪ (495), ಕಾಸರಗೋಡು (429), ನೀಲೇಶ್ವರಂ (391) ಮತ್ತು ಮಂಜೇಶ್ವರಂ (363) ಬ್ಲಾಕ್‍ಗಳು ಹಸಿರು ಸಂಸ್ಥೆಗಳ ಯೋಜನೆಯಲ್ಲಿ ಮುಂಚೂಣಿಯಲ್ಲಿದೆ.




