ಕಾಸರಗೋಡು: ಶಾಲಾ ಮೈದಾನದಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಣ ನಡೆಸಿದ ಪ್ರಕರಣದಲ್ಲಿ ಬಂದ್ಯೋಡು ಸನಿಹದ ವೀರನಗರ ನಿವಾಸಿ ಮಹಮ್ಮದ್ ಶಮ್ಮಾನ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಮೈದನದಲ್ಲಿ ಇತ್ತೀಚೆಗೆ ಧೂಳೆಬ್ಬಿಸಿ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿರುವುದಲ್ಲದೆ, ಇದನ್ನು ಚಿತ್ರೀಕರಿಸುತ್ತಿದ್ದ ಸಂದರ್ಭ ಪೊಲೀಸರು ಸಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.




