ಬದಿಯಡ್ಕ: ಏತಡ್ಕ ಶ್ರೀಸದಾಶಿವ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪುಣ್ಯ ನದಿಗಳ ಜಲ, ಯಾಗ ಭೂಮಿಯ ಹಾಗೂ ಪುಣ್ಯ ಸ್ಥಳಗಳ ಮೃತ್ತಿಕೆ, ಶುದ್ಧ ಭಸ್ಮ, ಶಿವಪಂಚಾಕ್ಷರೀ ಜಪಲಿಪಿ ಯಜ್ಞ ಪುಸ್ತಕ, ಹಸುವಿನ ಕೊಂಬು ಎತ್ತಿದ ಮಣ್ಣು, ಸಮುದ್ರ ನೀರು ಮಣ್ಣಿನ ಮಡಿಕೆಯಲ್ಲಿ ತುಂಬಿಕೊಂಡ ಮಾತೆಯರ ಸಾಲು `ಫಲಾರ್ಪಣಂ' ಮೆರವಣಿಗೆಯಲ್ಲಿ ಗಮನಸೆಳೆಯಿತು.
ಏತಡ್ಕ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೊದಲ ದಿನ ಏತಡ್ಕ ಪೇಟೆಯಿಂದ ಶ್ರೀಕ್ಷೇತ್ರಕ್ಕೆ ಆಕರ್ಷಕ `ಫಲಾರ್ಪಣಂ' ಹಸಿರುವಾಣಿ ಮೆರವಣಿಗೆ ನಡೆಯಿತು. ಮುತ್ತುಕೊಡೆ, ಚೆಂಡೆ, ವಾದ್ಯಮೇಳಗಳೊಂದಿಗೆ ಭಗವದ್ಭಕ್ತರು ಹೆಜ್ಜೆಹಾಕಿದರು. ಶ್ರೀಕ್ಷೇತ್ರದಲ್ಲಿ ಉಗ್ರಾಣ ತುಂಬಿಸಲಾಯಿತು.


