HEALTH TIPS

ಗೋಹತ್ಯೆ ನಿಷೇಧಿಸಿ, ರಾಷ್ಟ್ರಮಾತಾ ಎಂದು ಘೋಷಿಸಿ: ಅವಿಮುಕ್ತೇಶ್ವರಾನಂದ ಸರಸ್ವತಿ

ಮಹಾಕುಂಭ್‌ ನಗರ, ಉತ್ತರಪ್ರದೇಶ: 'ಗೋ ಹತ್ಯೆ ನಿಷೇಧಿಸುವ ಕುರಿತು ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವು ನೀಡಿರುವ ಉತ್ತರಾಖಂಡ ಶಂಕರಾಚಾರ್ಯ ಜೋತಿರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಮಾರ್ಚ್‌ 17ರ ಬಳಿಕ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸೆಕ್ಟರ್‌-19ರಲ್ಲಿರುವ ಶಂಕರಾಚಾರ್ಯ ಶಿಬಿರದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಗೋವಿನ ದೇಹದಲ್ಲಿ 33 ಕೋಟಿ ದೇವರು ನೆಲಸಿದ್ದಾರೆ. ಹೀಗಾಗಿ, ಕಳೆದ ಒಂದೂವರೆ ವರ್ಷದಿಂದ ಗೋಹತ್ಯೆ ನಿಷೇಧಿಸಿ, ರಾಷ್ಟ್ರಮಾತ ಎಂದು ಘೋಷಿಸಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ' ಎಂದು ತಿಳಿಸಿದರು.

'ಮಾಘಿ ಪೂರ್ಣಿಮೆಯ ಮರುದಿನದಿಂದ 33 ದಿನಗಳ ಕಾಲ ದೀರ್ಘಯಾತ್ರೆ ಆರಂಭಿಸಲಿದ್ದು, ಮಾ.17ರಂದು ಈ ಯಾತ್ರೆಯು ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಕೇಂದ್ರ ಸರ್ಕಾರವು 33 ದಿನದಲ್ಲಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಮಾ.17ರ ಸಂಜೆ 5 ಗಂಟೆಗೆ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದರು.

'ಗೋವನ್ನು ಪ್ರಾಣಿಗಳ ವರ್ಗದಿಂದ ಕೈಬಿಡಬೇಕು. ಗೋಹತ್ಯೆ ನಿಷೇಧಿಸಿ, ರಾಷ್ಟ್ರಮಾತಾ ಎಂದು ಘೋಷಿಸಬೇಕು. ಗೋವಿನ ಕುರಿತಾಗಿ ರಾಜ್ಯಗಳು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಬೇಕು' ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಆಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries