ವಾಟ್ಸಾಪ್ ಬಳಕೆದಾರರಿಗೆ ಸಿಹಿಸುದ್ದಿ ಇದೆ. ಜನಪ್ರಿಯ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ (WhatsApp) ಮತ್ತೊಂದು ಹೊಸ ಫೀಚರ್ ತಂದಿದೆ. ನೀವು, ಇನ್ಮುಂದೆ ರಂಗು ರಂಗಿನಿಂದ ಕೂಡಿದ ಚಾಟ್ ಬಾಕ್ಸ್ ಬಳಸಬಹುದು. ಹೌದು, ಮೆಟಾ ಒಡೆತನದ ವಾಟ್ಸಾಪ್ ಹೊಸ ಚಾಟ್ ಥೀಮ್ಸ್ (WhatsApp Chat Themes) ಅನ್ನು ಪರಿಚಯಿಸಿದೆ. ಇದರೊಂದಿಗೆ ವಾಟ್ಸಾಪ್ ಜಾಗತಿಕವಾಗಿ ಹೊಸ ಚಾಟ್ ಥೀಮ್‌ಗಳು ಮತ್ತು ವಾಲ್‌ಪೇಪರ್‌ಗಳನ್ನು ಹೊರತರಲು ಪ್ರಾರಂಭಿಸಿದೆ. ನಿಮಗೆ ಈ ಹೊಸ ಫೀಚರ್ ಈವರೆಗೆ ಲಭ್ಯವಾಗದಿದ್ದರೆ, ಮುಂದಿನ ಕೆಲವೇ ವಾರಗಳಲ್ಲಿ ಅಪ್ಡೇಟ್ ಆಗಲಿದೆ.
ವಾಟ್ಸಾಪ್‌ನಲ್ಲಿ ಮತ್ತೊಂದು ಕುತೂಹಲಕಾರಿ ವೈಶಿಷ್ಟ್ಯ ಲಭ್ಯವಿದೆ. ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ವಾಟ್ಸಾಪ್, ಇತ್ತೀಚೆಗೆ ಹಲವು ಹೊಸ ಫೀಚರ್ಸ್‌ಗಳನ್ನು ಬಿಡುಗಡೆ ಮಾಡಿದೆ. ನೀವು ವರ್ಣರಂಜಿತ ಬಬಲ್ಸ್ ಮತ್ತು ನ್ಯೂ ವಾಲ್‌ಪೇಪರ್ಸ್ ಜೊತೆ ನಿಮ್ಮ ಚಾಟ್‌ಗಳನ್ನು ಕಸ್ಟಮೈಸ್ ಮಾಡಬಹುದು. ಹೊಸ ಅಪ್ಡೇಟ್ ಜೊತೆಗೆ ನೀವು ಸದ್ಯ ಪ್ರಿ-ಸೆಟ್ ಥೀಮ್ಸ್ ಪಡೆಯಬಹುದು. ಹಾಗೆಯೇ ನಿಮ್ಮ ನೆಚ್ಚಿನ ಶೈಲಿಯನ್ನು ಆಧರಿಸಿ ಬಣ್ಣವನ್ನು ಸಹ ಬದಲಿಸಬಹುದು. ವಾಟ್ಸಾಪ್‌ನಲ್ಲಿ ಚಾಟ್ ಥೀಮ್ಸ್ ಬಳಕೆ ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.
ವಾಟ್ಸಾಪ್ ನ್ಯೂ ಕಸ್ಟಮೈಸೇಶನ್ ವೈಶಿಷ್ಟ್ಯ
ಪ್ರಸ್ತುತ ವಾಟ್ಸಾಪ್‌ನಲ್ಲಿ ಚಾಟ್ ಬಬಲ್ಸ್ ಮತ್ತು ಬ್ಯಾಕ್ಗ್ರೌಂಡ್ ಅನ್ನು ನಿಮಗೆ ಇಷ್ಟಬಂದಂತಹ ಬಣ್ಣಕ್ಕೆ ಚೇಂಜ್ ಮಾಡಬಹುದು. ಇದರೊಂದಿಗೆ ವಾಟ್ಸಾಪ್ ಅನೇಕ ಪ್ರೀ-ಸೆಟ್ ಥೀಮ್‌ಗಳನ್ನು ಸಹ ಪರಿಚಯಿಸಿದೆ. ಇದು ಬ್ಯಾಕ್ಗ್ರೌಂಡ್ ಮತ್ತು ಬಬಲ್ ಬಣ್ಣವನ್ನು ಹೊಂದಿಸುತ್ತದೆ. ಇದಷ್ಟೆ ಅಲ್ಲದೇ, ನಿಮ್ಮದೇ ಆದ ವಿಶೇಷ ಬಣ್ಣವನ್ನು ಸಹ ಹೊಂದಿಸಬಹುದು.
ಇನ್ಮುಂದೆ 30 ಹೊಸ ವಾಲ್‌ಪೇಪರ್ಸ್ ಲಭ್ಯ
ವಾಟ್ಸಾಪ್ ಏನೇ ಮಾಡಿದ್ರು ವಿಭಿನ್ನವಾಗಿರುತ್ತದೆ. ಇನ್ಮುಂದೆ ವಾಟ್ಸಾಪ್ ಚಾಟ್‌ಗಳನ್ನು ಮತ್ತಷ್ಟು ಕುತೂಹಲಕಾರಿಯಾಗಿಸಲು 30 ಹೊಸ ವಾಲ್‌ಪೇಪರ್ಸ್ ಲಭ್ಯಗೊಳಿಸಿದೆ. ಈ ಮೂಲಕ ಬಳಕೆದಾರರು ಸದ್ಯ ನಿಮ್ಮ ಕ್ಯಾಮೆರಾ ರೋಲ್‌ನಿಂದ ಕಸ್ಟಮ್ ಬ್ಯಾಕ್ಗ್ರೌಂಗಳನ್ನು ವಾಟ್ಸಾಪ್‌ನಲ್ಲಿಯೇ ಅಪ್ಲೋಡ್ ಮಾಡುವ ಆಪ್ಷನ್ ಕೂಡ ಒದಗಿಸಲಾಗಿದೆ. ನೀವು ಇದರ ಸಹಾಯದಿಂದ, ಸಂಪೂರ್ಣವಾಗಿ ಕಸ್ಟಮ್ಗೊಳಿಸಿದ ಅನುಭವ ಪಡೆಯಬಹುದಾಗಿದೆ.
ಎಲ್ಲಾ ಚಾಟ್‌ಗಳಿಗೆ ಒಂದೇ ಥೀಮ್
ಪ್ರಸ್ತುತ ವಾಟ್ಸಾಪ್ ಬಳಕೆದಾರರು ಎಲ್ಲಾ ಚಾಟ್‌ಗಳಿಗೆ ಒಂದೇ ಥೀಮ್ ಜೋಡಿಸಬಹುದು. ಅಂದರೆ, ಪ್ರತಿಯೊಂದು ವಾಟ್ಸಾಪ್ ಚಾಟ್‌ಗೆ ವಿಭಿನ್ನ ಥೀಮ್ ಹೊಂದಿಸಬಹುದು. ಆದಾಗ್ಯೂ, ಈ ಥೀಮ್‌ಗಳು ನಿಮಗೆ ಮಾತ್ರ ಗೋಚರಿಸುತ್ತವೆ. ನೀವು ಪ್ರಸ್ತುತ ನಿಮ್ಮ ವಾಟ್ಸಾಪ್ ಚಾಟ್‌ಗಳನ್ನು ಖಾಸಗಿಯಾಗಿ ಇರಿಸಿಕೊಳ್ಳಬಹುದು. ಈ ಮೂಲಕ ಚಾಟ್‌ಗಳನ್ನು ಹೆಚ್ಚು ಆಕರ್ಷಕವಾಗಿ ಮಾಡಬಹುದು. ಸದ್ಯ ನಿಮ್ಮ ವಾಟ್ಸಾಪ್ ಚಾನೆಲ್‌ಗಳ ಥೀಮ್ ಸಹ ಚೇಂಜ್ ಮಾಡಬಹುದು. ಇದು ಇತರೆ ಬಳಕೆದಾರರಿಗೆ ಅವರ ಸಂವಹನದಲ್ಲಿ ವಿಭಿನ್ನ ಅನುಭವ ನೀಡುತ್ತದೆ.
ಚಾಟ್ ಥೀಮ್ಸ್ ಬಳಸಲು ಹೀಗೆ ಮಾಡಿ
- ಮೊದಲು ನಿಮ್ಮ ಫೋನಿನಲ್ಲಿರು ವಾಟ್ಸಾಪ್ ಓಪನ್ ಮಾಡಿ
- ಡೀಫಾಲ್ಟ್ ಚಾಟ್ ಥೀಮ್ ಅಪ್ಲೈ ಮಾಡಲು, ಸೆಟ್ಟಿಂಗ್ಸ್‌ಗೆ (Settings) ಹೋಗಿ ಚಾಟ್ಸ್ (Chats) ಆಯ್ಕೆ ಮಾಡಿ.
- ಬಳಿಕ ಡೀಫಾಲ್ಟ್ ಚಾಟ್ ಥೀಮ್ (Default chat theme) ಆಯ್ಕೆ ಮಾಡಿ.
- ಹೀಗೆ ಮಾಡುವುದರಿಂದ ನಿಮ್ಮ ಆಯ್ಕೆಯ ಥೀಮ್ ಅನ್ನು ಅಪ್ಲೈ ಮಾಡಬಹುದು.
- ನೀವು iOSನಲ್ಲಿ ಸ್ಕ್ರೀನ್ ಮೇಲ್ಭಾಗದಲ್ಲಿರುವ ಚಾಟ್ ಅನ್ನು ಟ್ಯಾಪ್ ಮಾಡುವ ಮೂಲಕ ಇದನ್ನು ಕಸ್ಟಮೈಸ್ ಮಾಡಬಹುದು.
- ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ, ಬಲ ಭಾಗದಲ್ಲಿರುವ ಮೂರು ಡಾಟ್ (ತ್ರೀ-ಡಾಟ್) ಮೆನು ಕ್ಲಿಕ್ ಮಾಡಿ. ಮತ್ತು ಥೀಮ್ ಆಯ್ಕೆ ಮಾಡಬಹುದು.
- ಇಲ್ಲಿ ನಿಮಗೆ ಎಲ್ಲ ಹೊಸ ಥೀಮ್‌ಗಳು ಮತ್ತು ಬಣ್ಣಗಳು ಗೋಚರಿಸುತ್ತವೆ.






