ಕಾಸರಗೋಡು: ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿ ಕಣ್ಣು ಕಳೆದುಕೊಂಡಿದ್ದ ವೆಂಞõÁಟೆ ಎಂ.ವಿ.ಸಾವಿತ್ರಿ(45) ಕಾಂಞಂಗಾಡ್‍ನ ಜಿಲ್ಲಾ ಆಸ್ಪತ್ರಯಲ್ಲಿ ಸಾವಿಗೀಡಾದರು.
1996 ರಲ್ಲಿ ಕಾಂಞಂಗಾಡ್ ನೆಹರೂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಾವಿತ್ರಿ ರ್ಯಾಗಿಂಗ್‍ಗೆ ತುತ್ತಾಗಿದ್ದರು. ಆ ಬಳಿಕ ಅವರು ಕಾಲೇಜಿಗೆ ತೆರಳದೆ ಮನೆಯಲ್ಲೇ ಉಳಿದುಕೊಂಡರು. ತನ್ನ ಬಲಕಣ್ಣನ್ನು ಕಿತ್ತು ತೆಗೆದು ತನ್ನನ್ನು ರ್ಯಾಗಿಂಗ್‍ಗೊಳಿಸಿದ ಸಮಾಜವನ್ನು ನೋಡಲಾರೆ ಎಂದು ತೀರ್ಮಾನಿಸಿ ಮನೆಯಲ್ಲೇ ಏಕಾಂಗಿಯಾಗಿ ಕೊಠಡಿಯಲ್ಲಿ ಉಳಿದುಕೊಂಡಿದ್ದರು.ಕಳೆದ ಎರಡು ವರ್ಷಗಳಿಂದ ಮಂಜೇಶ್ವರದ ಸ್ನೇಹಾಲಯದಲ್ಲಿದ್ದರು. ಅಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.





