ಕಾಸರಗೋಡು: ಕಾಸರಗೋಡು ಜಿಲ್ಲಾ ಎಂಪ್ಲಾಯ್‍ಮೆಂಟ್ ಎಕ್ಸ್‍ಚೇಂಜ್ ನ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಪ್ಲಾಯಬಿಲಿಟಿ ಕೇಂದ್ರದ ನೇತೃತ್ವದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ತಿಂಗಳ 22ರಂದು ಬೆಳಗ್ಗೆ 10:30ರಿಂದ ವಿದ್ಯಾನಗರದ ಜಿಲ್ಲಾ ಎಂಪ್ಲಾಯಬಿಲಿಟಿ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳವು ಹಮ್ಮಿಕೊಳ್ಳಲಾಗಿದೆ. ಪ್ರಮುಖ ಆಟೋಮೊಬೈಲ್ ಕಂಪನಿಗಳಿಗೆ ಫೀಲ್ಡ್ ಸೇಲ್ಸ್ ಕನ್ಸಲ್ಟೆಂಟ್, ಟೆಕ್ನಿಷಿಯನ್ಸ್, ಸರ್ವೀಸ್ ಅಡ್ವೈಸರ್, ಮೆಂಟೆನೆನ್ಸ್ ಅಸಿಸ್ಟೆಂಟ್, ಸ್ಪೇರ್ ಪಾಟ್ರ್ಸ್ ಎಕ್ಸಿಕ್ಯೂಟಿವ್ ಇತ್ಯಾದಿ ಹುದ್ದೆಗಳಿಗೆ 15ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುವುದು. ಎಂಪ್ಲಾಯಬಿಲಿಟಿ ಸೆಂಟರ್ ನಲ್ಲಿ ನೋಂದಾಯಿಸಿಕೊಂಡವರಿಗೆ ಅವಕಾಶ. ನೋಂದಣಿಯಾಗದ ಉದ್ಯೋಗಾರ್ಥಿಗಳಿಗೆ ಅಂದು ಬೆಳಗ್ಗೆ 10 ಗಂಟೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ 9207155700ರಿಂದ ಸಂಪರ್ಕಿಸಬಹುದು.




