HEALTH TIPS

ಉತ್ತರ ಪ್ರದೇಶ | ಕಾರ್ತಿಕೇಯ ಮಹಾದೇವ ದೇಗುಲದಲ್ಲಿ 46 ವರ್ಷಗಳ ಬಳಿಕ ಹೋಳಿ ಆಚರಣೆ

ಸಂಭಲ್: ಉತ್ತರ ಪ್ರದೇಶದ ಸಂಭಲ್‌ನ ಖಗ್ಗು ಸರೈನಲ್ಲಿರುವ ಕಾರ್ತಿಕೇಯ ಮಹಾದೇವ ದೇವಸ್ಥಾನದಲ್ಲಿ 46 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೋಳಿ ಹಬ್ಬ ಆಚರಿಸಲಾಯಿತು.

1978ರ ಗಲಭೆಯ ನಂತರ ಈ ದೇವಾಲಯ ಮುಚ್ಚಲ್ಪಟ್ಟಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ತೆರೆಯಲಾಗಿತ್ತು.

ಹೋಳಿ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಹಿಂದೂ ಸಂಘಟನೆಗಳು ಉತ್ಸಾಹದಿಂದ ಭಾಗವಹಿಸಿದವು.

'ಖಗ್ಗು ಸರೈನಲ್ಲಿರುವ ಕಾರ್ತೀಕೇಯ ಮಹಾದೇವ ದೇವಸ್ಥಾನದಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಯಾರೂ ಚಿಂತಿಸುವ ಅಗತ್ಯವಿಲ್ಲ. ಜನರು ಸುರಕ್ಷಿತ ವಾತಾವರಣದಲ್ಲಿ ಹಬ್ಬವನ್ನು ಆನಂದಿಸುತ್ತಿದ್ದಾರೆ. ಸುಗಮ ಆಚರಣೆಗಾಗಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ' ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಶ್‌ ಚಂದ್ರ ತಿಳಿಸಿದ್ದಾರೆ.

ಆನಂದ್ ಅಗರವಾಲ್, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಜಿಲ್ಲಾಧ್ಯಕ್ಷ46 ವರ್ಷಗಳ ಬಳಿಕ, ಕಾರ್ತಿಕೇಯ ಮಹಾದೇವ ದೇವಸ್ಥಾನದಲ್ಲಿ ಹೋಳಿ ಆಡುವ ಭಾಗ್ಯ ನಮಗೆ ಸಿಕ್ಕಿದೆ. ವಿವಿಧ ಸಾಮಾಜಿಕ ಸಂಘಟನೆಗಳ ಜನರು ಇಲ್ಲಿ ಜಮಾಯಿಸಿದ್ದು, ಹೂವುಗಳು ಮತ್ತು ಬಣ್ಣಗಳೊಂದಿಗೆ ಹೋಳಿ ಆಚರಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries