ಕಾಸರಗೋಡು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೆÇೀಷ್ ಕಾಯ್ದೆಗೆ ಸಂಬಂಧಿಸಿ ಕಾರ್ಯಕ್ರಮ ಕಾರ್ಯಕ್ರಮ ಕಾಸರಗೋಡು ಆರ್.ಡಿ.ಓ ಕಛೇರಿಯಲ್ಲಿ ಜರುಗಿತು. ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಕೀಲೆ ಎಸ್.ಎನ್.ಸರಿತಾ ಸಮಾರಂಭ ಉದ್ಘಾಟಿಸಿದರು.
ಕಾಸರಗೋಡು ಆರ್.ಡಿ.ಒ ಪಿ.ಬಿನುಮೋನ್ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಸಹಾಯಕ ನಿರ್ವಹಣಾ ನ್ಯಾಯಮಂಡಳಿಯ ಎಂ. ಪ್ರಸೀತಾ ಪೆÇೀಷ ಅವಲೋಕನ ತರಗತಿ ನಡೆಸಿದರು. ಕಾಸರಗೋಡು ಆರ್.ಡಿ.ಒ ಕಚೇರಿ ಆಂತರಿಕ ದೂರು ಸಮಿತಿ ಅಧ್ಯಕ್ಷೆ ಕೆ. ಶೀಲಾ, ಹಾರ್ಬರ್ ಇಂಜಿನಿಯರಿಂಗ್ ಆಫೀಸ್, ಪೆÇೀರ್ಟ್ ಕಛೇರಿ, ಆರ್.ಡಿ. ಓ ಕಛೇರಿ ಮಹಿಳಾ ನೌಕರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎ. ಅಮೀನಾ ಸ್ವಾಗತಿಸಿದರು. ವಿ.ವಿ.ಪ್ರೀತಿ ವಂದಿಸಿದರು.


