ದೇರ್ ಅಲ್-ಬಲಾಹ್: ಗಾಜಾಪಟ್ಟಿಯ ಮೇಲೆ ಮಂಗಳವಾರ ಮುಂಜಾನೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 14 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.
ಈ ಹಿಂದಿನ ದಾಳಿಗಳ ಅವಶೇಷಗಳನ್ನು ತೆರವುಗೊಳಿಸಲು ಬಳಸುತ್ತಿದ್ದ ಬುಲ್ಡೋಜರ್‌ಗಳು ಸೇರಿದಂತೆ ಬೃಹತ್ ಯಂತ್ರೋಪಕರಣಗಳು ದಾಳಿಯಲ್ಲಿ ನಾಶವಾಗಿವೆ.
ಲೆಬನಾನ್‌ನಲ್ಲೂ ಮಂಗಳವಾರ ನಡೆದ ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ ನಡೆಸಿದ 18 ತಿಂಗಳ ದಾಳಿಯು ಗಾಜಾದ ವಿಶಾಲ ಪ್ರದೇಶಗಳನ್ನು ನಾಶಪಡಿಸಿದೆ. ಇದರಲ್ಲಿ ಹೆಚ್ಚಿನವು ಎಂದಿಗೂ ಮರುನಿರ್ಮಾಣವಾಗುವುದಿಲ್ಲ ಎಂಬ ಆತಂಕ ಸೃಷ್ಟಿಯಾಗಿದೆ.
ದಾಳಿ ಕುರಿತಂತೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




