ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 22 ನಕ್ಸರನ್ನು ಬಂಧಿಸಲಾಗಿದ್ದು, ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕೋಬ್ರಾ ತಂಡ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೂರು ಪ್ರದೇಶಗಳಿಂದ ನಕ್ಸಲರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಕಮೆಟ್ಲಾ ಎನ್ನುವ ಗ್ರಾಮದ ಬಳಿ ಏಳು ನಕ್ಸಲರನ್ನು, ಬೆಲ್ಚೂರು ಗ್ರಾಮದ ಬಂದರಿನ ಬಳಿ ಆರು ಮಂದಿ ಹಾಗೂ ಕಂಡಕಾರ್ಕ ಎನ್ನುವ ಗ್ರಾಮದಲ್ಲಿ 9 ನಕ್ಸಲರನ್ನು ಬಂಧಿಸಲಾಗಿದೆ.
ಟಿಫಿನ್ ಬಾಂಬ್, ಜೆಲೆಟಿನ್ ಸ್ಟಿಕ್ಸ್, ಎಲೆಕ್ಟ್ರಿಕ್ ತಂತಿಗಳು, ಬ್ಯಾಟರಿ, ಸೇರಿ ಹಲವು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರೆಲ್ಲರೂ 19 ರಿಂದ 45 ವರ್ಷ ಒಳಗಿನವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





