HEALTH TIPS

ಉಕ್ರೇನ್ ನಗರಗಳ ಮೇಲೆ ರಷ್ಯಾ ದಾಳಿ: ಇಬ್ಬರು ಸಾವು, 27 ಮಂದಿಗೆ ಗಾಯ

ಕೀವ್: ಈಶಾನ್ಯ ಉಕ್ರೇನ್‌ನ ಹಾರ್ಕಿವ್ ಮತ್ತು ಸುಮಿಯಲ್ಲಿ ರಾತ್ರಿಯಿಡಿ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 27 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಹಾರ್ಕಿವ್ ನಗರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 26 ಜನರು ಗಾಯಗೊಂಡಿದ್ದಾರೆ ಎಂದು ನಗರ ಮೇಯರ್ ಇಗೊರ್ ಟೆರೆಖೋವ್ ಟೆಲಿಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ.

"ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಲಸ್ಟರ್ ಯುದ್ಧಸಾಮಗ್ರಿ ಹಾಗೂ ಖಂಡಾಂತರ ಕ್ಷಿಪಣಿ ಬಳಸಿ ಹಾರ್ಕಿವ್ ಮೇಲೆ ದಾಳಿ ನಡೆಸಲಾಗಿದೆ. ಹೀಗಾಗಿ ಭಾರಿ ಪ್ರಮಾಣದ ಹಾನಿಯಾಗಿದೆ. 15 ಅಪಾರ್ಟ್‌ಮೆಂಟ್ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.

ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹಾರ್ಕಿವ್ ಪ್ರಾದೇಶಿಕ ಗವರ್ನರ್ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ.

ರಷ್ಯಾದ ಗಡಿಯ ಸಮೀಪವಿರುವ ಸುಮಿಯಲ್ಲಿ, ಇರಾನಿನ ನಿರ್ಮಿತ ಶಹೀದ್ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲಾಗಿದ್ದು, ಓರ್ವ ಸಾವಿಗೀಡಾಗಿ, ಇನ್ನೊಬ್ಬರು ಗಾಯಗೊಂಡಿದ್ದರು ಎಂದು ಪ್ರಾದೇಶಿಕ ಮಿಲಿಟರಿ ಆಡಳಿತ ತಿಳಿಸಿದೆ.

ನಗರದ ನಾಗರಿಕ ಮೂಲಸೌಕರ್ಯ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

ಯುದ್ಧಾರಂಭವಾಗಿ ಮೂರು ವರ್ಷಕ್ಕೂ ಹೆಚ್ಚಾಗಿದೆ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದರೂ ವೈಮಾನಿಕ ದಾಳಿಗಳು ಹೆಚ್ಚಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries