ಕಾಸರಗೋಡು: ಮೀನುಗಾರರನ್ನು ಹಾಗೂ ರಾಷ್ಟ್ರೀಯ ಭದ್ರತೆಗೆ ಆಪತ್ತು ತಂದೊಡ್ಡಲಿರುವ ಸಮುದ್ರ ಮರಳುಗಾರಿಕೆ ಯೋಜನೆಯಿಂದ ಹಿಂದೆ ಸರಿಯುವಂತೆ ಆಗ್ರಹಿಸಿ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ನೇತೃತ್ವದಲ್ಲಿ ಐಕ್ಯರಂಗ ವತಿಯಿಂದ ಏ. 21ರಿಂದ ಕಾಸರಗೋಡಿನಿಂದ ಆರಂಭಗೊಳ್ಳಲಿರುವ ಕರಾವಳಿ ಸಂರಕ್ಷಣಾ ಹೋರಾಟ ಯಾತ್ರೆಯ ಯಶಸ್ವಿಗಾಗಿ ಕಾಸರಗೋಡು ವಿಧಾನಸಭಾ ಸಮಿತಿ ವತಿಯಿಂದ ಸಭೆ ಆಯೋಜಿಸಲಾಯಿತು.
ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಅಧ್ಯಕ್ಷ ಮಾಹಿನ್ ಕೆಲೋಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಾಥಾ ಯಶಸ್ವಿಗಾಗಿ ಜಿಲ್ಲಾದ್ಯಂತ ಸಂಪರ್ಕ ಅಭಿಯಾನ ನಡೆಸಲು ತೀಮಾನಿಸಲಾಯಿತು. ಈ ನಿಟ್ಟಿನಲ್ಲಿ ಏಪ್ರಿಲ್ 17 ಮತ್ತು 18 ರಂದು ನಗರಸಭೆ, ಪಂಚಾಯತ್ ಮಟ್ಟದಲ್ಲಿ ಸಭೆ ನಡೆಯಲಿವೆ. ಏಪ್ರಿಲ್ 18 ರಂದು ಶಾಸಕ ಎನ್.ಎ. ನೆಲ್ಲಿಕುನ್ನು ನೇತೃತ್ವದಲ್ಲಿ, 19 ರಂದು ವಾರ್ಡ್ ಘಟಕ ಮಟ್ಟ, ಪಂಚಾಯತ್ ಮತ್ತು ಪುರಸಭೆ ಮಟ್ಟದಲ್ಲಿ ನಾಯಕರ ನೇತೃತ್ವದಲ್ಲಿ ಪ್ರವಾಸ ನಡೆಸಲು ನಿರ್ಧರಿಸಲಾಯಿತು.
ಕೆ.ನೀಲಕಂಠನ್, ಎ.ಗೋವಿಂದನ್ ನಾಯರ್, ವಕೀಲ ಎ ಗೋವಿಂದನ್ ನಾಯರ್, ಎ.ಎಂ ಕಡವತ್, ಅಬ್ದುಲ್ಲಕುಞÂ ಚೆರ್ಕಳ, ಎಂ.ಸಿ ಪ್ರಭಾಕರನ್, ನ್ಯಾಷನಲ್ ಅಬ್ದುಲ್ಲಾ,
ಸಿವಿ ಜೇಮ್ಸ್, ಆರ್. ಗಂಗಾಧರನ್, ಸಾಜಿದ್ ಮವ್ವಲ್, ವಾರಿಜಾಕ್ಷನ್ ನಾಯರ್, ನಾಸರ್ ಚಾಯಿಂಡಡಿ, ಖಾದರ್ ಮಾನ್ಯ, ಅರ್ಜುನನ್ ತಾಯಲಂಗಾಡಿ ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕ ಕೆ. ಖಾಲಿದ್ ಸ್ವಾಗತಿಸಿದರು.





