ಕಾಸರಗೋಡು: ನ್ಯಾಯಾಲಯದ ಶುಲ್ಕವನ್ನು ಭಾರೀ ಹೆಚ್ಚಳಗೊಳಿಸಿರುವ ಕ್ರಮದ ವಿರುದ್ಧ ಕೇರಳ ವಕೀಲರ ಕ್ಲರ್ಕ್‍ಗಳ ಸಂಘಟನೆ(ಕೆಎಸಿಎ) ವತಿಯಿಂದ ಜಿಲ್ಲಾ ಖಜಾನೆ ಎದುರು ಪ್ರತಿಭಟನೆ ನಡೆಸಲಾಯಿತು. ಇದಕ್ಕೂ ಮೊದಲು ಕಾಸರಗೋಡು ವಿದ್ಯಾನಗರದ ನ್ಯಯಾಲಯ ಸಂಕೀರ್ಣ ವಠಾರದಿಂದ ಜಿಲ್ಲಾ ಖಜಾನೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸಂಘಟನೆ ರಾಜ್ಯ ಸಮಿತಿ ಸದಸ್ಯ ಜಯದೇವನ್ ಸಮಾರಂಭ ಉದ್ಘಾಟಿಸಿದರು. ಸಂಘಟನೆ ಕಾಸರಗೋಡು ಘಟಕ ಅಧ್ಯಕ್ಷ ಕೆ. ಜಯರಾಂ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎ. ರಘುನಾಥ ನಾಯ್ಕ್ ಮುಖ್ಯ ಭಾಷಣ ಮಾಡಿದರು. ಪದಾಧಿಕಾರಿಗಳಾದ ಎ. ಗಣೇಶ್, ಬಿ. ಜಗದೀಶ್, ಕೆ. ಕಮಲಾಕ್ಷ ಮೊದಲದವರು ಉಪಸ್ಥಿತರಿದ್ದರು. ಅನಿಲ್ ಕುಮಾರ್ ಕೆ. ಸ್ವಾಗತಿಸಿದರು. ಪ್ರಶಾಂತ ಕುಮಾರ್ ವಂದಿಸಿದರು.




