ಮುಳ್ಳೇರಿಯ : ಮುಳ್ಳೇರಿಯ ಸನಿಹದ ನೆಚ್ಚಿಪಡ್ಪು ಎಂಬಲ್ಲಿ ಕಾಡುಕೋಣದ ದಾಳಿಯಿಂದ ಪಳ್ಳಂಜಿ ಬಾಳಂಗಯ ನಿವಾಸಿ ಕುಞರಾಮನ್ (75)ಗಂಭೀರ ಗಾಐಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಅಶ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಗಿದೆ.
ನೆಚ್ಚಿಪಡ್ಪುವಿನ ಅಂಗಡಿಯಿಂದ ಗುರುವಾರ ಬೆಳಗ್ಗೆ ಸಾಮಗ್ರಿ ಖರೀದಿಸಿ ಮನೆಗೆ ತೆರಳುತ್ತಿದ್ದ ಕುಞÂರಾಮನ್ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು.




