ಕಾಸರಗೋಡು: ಪೆರುಂಬಳ ಸೇತುವೆಯಿಂದ ಯುವಕನೊಬ್ಬ ಚಂದ್ರಗಿರಿ ಹೊಳೆಗೆ ಹಾರಿರುವ ಬಗ್ಗೆ ಸಂಶಯದಿಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಊರವರು ಹುಡುಕಾಟ ಆರಂಭಿಸಿದ್ದಾರೆ. ಚೆಂಗಳ ಪಡಿಙËರ್‍ಮೂಲೆ ಬಾಫಕಿನಗರದ ಕಣ್ಣರ ನಿವಾಸಿ ಮಹಮ್ಮದ್ ಎಂಬವರ ಪುತ್ರ ಶೆರೀಫ್(45)ನಾಪತ್ತೆಯಾದವರು. ಇವರು ಸಂಚರಿಸಿದ್ದ ಸ್ಕೂಟರ್ ಹಾಗೂ ಚಪ್ಪಲಿ ಸೇತುವೆ ಸನಿಹ ಪತ್ತೆಯಾಗಿದೆ. ಶೆರೀಫ್ ಮಂಗಳವಾರದಿಂದ ನಾಪತ್ತೆಯಾಗಿರುವುದಾಗಿ ಮನೆಯವರು ತಿಳಿಸಿದ್ದಾರೆ.




