ಕಾಸರಗೋಡು: ನಗರದ ಎಂ.ಜಿ ರಸ್ತೆಯಲ್ಲಿಣ ಎ.ಟಿ.ಎಂ ಯಂತ್ರದಿಂದ ನಗದು ದೋಚಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಬೇಕಲ್ ಕೆಳಗಿನ ಕಡಪ್ಪುರ ನಿವಾಸಿ, ಪನಯಾಲ್ ತಚ್ಚಂಗಾಡ್ ಅರವತ್‍ನ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವ ಪಿ.ಕೆ ಮಹಮ್ಮದ್ ಸಫ್ವಾನ್(19)ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತ ಆರು ವಾಹನ ಕಳವು ಪ್ರಕರಣಗಳಲ್ಲೂ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗಿನ ಜಾವ 1.15ಕ್ಕೆ ಎಟಿಎಂ ಬಾಗಿಲು ಒಡೆಯಲು ಯತ್ನಿಸಿ, ಯಶಸ್ವಿಯಾಗದ ಹಿನ್ನೆಲೆಯಲ್ಲಿ ಕಳ್ಳ ಉಪೇಕ್ಷಿಸಿ ಪರಾರಿಯಾಗಿದ್ದನು. ಮಂಗಳವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ ಎಟಿಎಂ ಯಂತ್ರ ದರೋಡೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕಿನ ಸಹಾಯಕ ಪ್ರಬಂಧಕ ಎ.ಕೆ ಮಿಥಿಲಾ ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿತ್ತು.
ಮಹಮ್ಮದ್ ಸಫ್ವಾನ್ ತನ್ನ ತಾಯಿಯ ಎಟಿಎಂ ಕಾರ್ಡು ಬಳಸಿ 500ರೂ. ನಗದು ಹಿಂಪಡೆದ ನಂತರ ಯಂತ್ರದ ಬಾಗಿಲು ಒಡೆಯಲು ಯತ್ನ ಆರಂಭಿಸಿದ್ದಾನೆ. ಡಿಜಿಟಲ್ ಲಾಕ್ ಒಡೆದಿದ್ದರೂ, ಹಣ ಒಳಗೊಂಡ ಲಾಕರ್ ತೆರೆಯಲಾಗದೆ ಪ್ರಯತ್ನ ಕೈಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಂತರ ಹಳೇ ಬಸ್‍ನಿಲ್ದಾಣದ ವಿವಿಧೆಡೆ ಸುತ್ತಾಡಿ ಇಲ್ಲಿನ ವ್ಯಾಪಾರಿ ಸಂಸ್ಥೆಯೊಂದರ ಎದುರು ನಿಲ್ಲಿಸಿದ್ದ ಬೈಕ್‍ನೊಂದಿಗೆ ಪರಾರಿಯಾಗಿದ್ದಾನೆ. ಆಲಂಪಾಡಿ ನಿವಾಸಿ ನೌಶಾದ್ ಎಂಬವರ ಬೈಕ್ ಇದಾಗಿದೆ. ಈ ಪ್ರದೆಶದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಬೈಕ್‍ನೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ.





