ಬದಿಯಡ್ಕ: ಎಡನೀರು ಮಠದ ಸಮೀಪದ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಮೋಪಾಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಬೆ ಏ. 27ರಂದು ಜರುಗಲಿದೆ.
ಸಮರಂಭದ ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಶ್ರೀಮಠದಲ್ಲಿ ಜರುಗಿತು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಕೆ.ಎಂ ಹೇರಳ, ವೇಣುಗೋಪಾಲ್, ಸೂರ್ಯ ಭಟ್ ಎಡನೀರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ತಂತ್ರಿವರ್ಯ ರಾಮಚಂದ್ರ ಭಟ್ ಕಾಟುಕುಕ್ಕೆ ದಿವ್ಯ ಉಪಸ್ಥಿತರಿರುವರು. ಧಾರ್ಮಿಕ ಮುಂದಾಳು, ಉದ್ಯಮಿ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು.
ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಉದ್ಯಮಿ ಮಧುಸೂಧನ ಆಯರ್ ಮಂಗಳೂರು, ನಿವೃತ್ತ ಐಎಎಸ್ ಅಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಡಾ. ನಾಗರಾಜ ಭಟ್, ಉದ್ಯಮಿಗಳಾದ ಶಿವಶಂಕರ್ ನೆಕ್ರಾಜೆ, ಗೋಪಾಲಕೃಷ್ಣ ಪೈ ಬದಿಯಡ್ಕ, ನಿತ್ಯಾನಂದ ಶೆಣೈ ಬದಿಯಡ್ಕ, ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ, ಎಸ್.ಎನ್ ಮಯ್ಯ ಬದಿಯಡ್ಕ, ಕೆ. ಮಾಧವ ಹೇರಳ, ಕೆ.ವಿ ಬಾಲಕೃಷ್ಣ ಆಚಾರಿ ಕಳೇರಿ, ಡಾ. ಉಮಾಮಹೇಶ್ವರಿ, ನಿವೃತ್ತ ಶಿಕ್ಷಕಿ ಸರಸ್ವತೀ ಬೇಳ ನಿವೃತ್ತ ಬ್ಯಾಂಕ್ ಪ್ರಬಂಧಕಿ ಭಾನುಮತಿ ಮೊದಲದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.





