HEALTH TIPS

ವಿಶ್ವ ಹಿಮೋಫಿಲಿಯಾ ದಿನ: ರಕ್ತ ಹೆಪ್ಪುಗಟ್ಟದೆ ಅಧಿಕ ರಕ್ತಸ್ರಾವ ಆಗೋದ್ಯಾಕೆ? ಹಿಮೋಫಿಲಿಯಾ ಲಕ್ಷಣವೇನು?

 ಇತ್ತೀಚಿಗೆ ರಸ್ತೆ ಅಪಘಾತಗಳು, ಮನೆಯಲ್ಲಿ ಸಂಭವಿಸುವ ಸಣ್ಣ ಪುಟ್ಟ ಅಪಘಾತಗಳು ಜನರನ್ನು ಸಾವಿಗೆ ತಳ್ಳುತ್ತಿವೆ. ಹಾಗೆ ಇತ್ತೀಚಿನ ದಿನಗಳಲ್ಲಿ ನೀವು ರಕ್ತಸ್ರಾವದಿಂದ ಉಂಟಾಗಿರುವ ಸಾವು ಎಂಬ ಪದವನ್ನು ನೀವು ಬಹಳವಾಗಿ ಕೇಳುತ್ತಿರಬಹುದು. ಅಪಘಾತದಂತಹ ಸಮಯದಲ್ಲಿ ಅಥವಾ ಅಚಾನಕ್ ಆಗಿ ಬಿದ್ದು ಗಾಯವಾದಾಗ ಹೆಚ್ಚು ರಕ್ತಸ್ರಾವವಾಗಿ ಮೃತಪಡುವವರ ಸಂಖ್ಯೆ ಹೆಚ್ಚಿರುವುದು ನೋಡಬಹುದು. ಹಾಗಾದ್ರೆ ಈ ರೀತಿ ರಕ್ತಸ್ರಾವಕ್ಕೆ ಗಾಯದ ತೀವ್ರತೆ ಒಂದೇ ಕಾರಣವಲ್ಲ ಇದಕ್ಕೆ ಹಿಮೋಫಿಲಿಯಾ ಎಂಬ ಸಮಸ್ಯೆಯೂ ಕಾರಣ.


ಇತ್ತೀಚಿಗೆ ರಸ್ತೆ ಅಪಘಾತಗಳು, ಮನೆಯಲ್ಲಿ ಸಂಭವಿಸುವ ಸಣ್ಣ ಪುಟ್ಟ ಅಪಘಾತಗಳು ಜನರನ್ನು ಸಾವಿಗೆ ತಳ್ಳುತ್ತಿವೆ. ಹಾಗೆ ಇತ್ತೀಚಿನ ದಿನಗಳಲ್ಲಿ ನೀವು ರಕ್ತಸ್ರಾವದಿಂದ ಉಂಟಾಗಿರುವ ಸಾವು ಎಂಬ ಪದವನ್ನು ನೀವು ಬಹಳವಾಗಿ ಕೇಳುತ್ತಿರಬಹುದು. ಅಪಘಾತದಂತಹ ಸಮಯದಲ್ಲಿ ಅಥವಾ ಅಚಾನಕ್ ಆಗಿ ಬಿದ್ದು ಗಾಯವಾದಾಗ ಹೆಚ್ಚು ರಕ್ತಸ್ರಾವವಾಗಿ ಮೃತಪಡುವವರ ಸಂಖ್ಯೆ ಹೆಚ್ಚಿರುವುದು ನೋಡಬಹುದು. ಹಾಗಾದ್ರೆ ಈ ರೀತಿ ರಕ್ತಸ್ರಾವಕ್ಕೆ ಗಾಯದ ತೀವ್ರತೆ ಒಂದೇ ಕಾರಣವಲ್ಲ ಇದಕ್ಕೆ ಹಿಮೋಫಿಲಿಯಾ ಎಂಬ ಸಮಸ್ಯೆಯೂ ಕಾರಣ.
ಹಲವರಲ್ಲಿ ಈ ಹಿಮೋಫಿಲಿಯಾ ಎಂಬ ಸಮಸ್ಯೆ ಕಂಡುಬರುತ್ತದೆ. ಸಣ್ಣದಾಗಿ ಗಾಯವಾದರು ಅಲ್ಲಿಂದ ರಕ್ತ ಹರಿಯುವಿಕೆ ಆರಂಭವಾಗುತ್ತದೆ. ಅಧಿಕ ರಕ್ತಸ್ರಾವವು ಅವರನ್ನು ಸಾವಿನ ದವಡೆಗೆ ತಳ್ಳುತ್ತದೆ. ಆದ್ರೆ ಈ ಕಾಯಿಲೆ ಇರುವುದು ಅವರಿಗೆ ತಿಳಿಯುವುದೇ ಇಲ್ಲ. ನಮ್ಮ ದೇಹಕ್ಕೆ ಗಾಯವಾದಾಗ ನೈಸರ್ಗಿಕವಾಗಿ ದೇಹವು ರಕ್ತ ಸ್ರಾವವನ್ನು ತಡೆಯುವ ಬಲ ಹೊಂದಿರಲಿದೆ. ಆದ್ರೆ ಯಾವ ಸಮಯದಲ್ಲಿ ಇದು ಸಾಧ್ಯವಾಗುವುದಿಲ್ಲವೋ ಆಗ ಸಮಸ್ಯೆ ಹೆಚ್ಚಾಗುತ್ತದೆ.
ಹಿಮೋಫಿಲಿಯಾ ಬಹಳ ಪ್ರಾಚೀನ ಕಾಯಿಲೆ ಫ್ರಾಂಕ್ ಸ್ಕ್ನಾಬೆಲ್ ಎಂಬಾತ 1989ರಲ್ಲಿ ವಿಶ್ವ ಹಿಮೋಫಿಲಿಯಾ ಒಕ್ಕೂಟವನ್ನು ರಚಿಸಿದ್ದರು. ಹಾಗೆ ಇದಕ್ಕೂ ಮೊದಲು ಈಜಿಪ್ಟ್ ರಾಣಿಗೆ ಹಿಮೋಫಿಲಿಯಾ ಉಂಟಾದ ಕಾರಣ ಇದಕ್ಕೆ ರಾಜ ಕಾಯಿಲೆ ಎಂದು ಕರೆಯಲಾಯಿತು. ಆದ್ರೆ ಬರು ಬರುತ್ತಾ ಈ ಸಮಸ್ಯೆಗೆ ಕಾರಣ ಹಾಗೂ ಪರಿಹಾರವನ್ನು ಜನರಿಗೆ ತಿಳಿಸುವ ಉದ್ದೇಶವಾಗಿ ವಿಶ್ವ ಹಿಮೋಫಿಲಿಯಾ ಒಕ್ಕೂಟ ಸ್ಥಾಪನೆಗೊಂಡ ದಿನವನ್ನು ವಿಶ್ವ ಹಿಮೋಫಿಲಿಯಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ.
ಈ ರೋಗವು ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯವನ್ನು ಸರಿಯಾಗಿ ತಡೆಯುತ್ತದೆ ಮತ್ತು ಕೀಲು ನೋವು, ಕಡಿಮೆ ಮೂಳೆ ಸಾಂದ್ರತೆ ಮತ್ತು ಆಂತರಿಕ ರಕ್ತಸ್ರಾವ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಿಮೋಫಿಲಿಯಾ ಕಾರಣಗಳು, ಸಮಸ್ಯೆಗಳು, ಲಕ್ಷಣಗಳು ಮತ್ತು ಚಿಕಿತ್ಸಾ ಪ್ರಕ್ರಿಯೆಯ ಬಗ್ಗೆ ಜನರಿಗೆ ಶಿಕ್ಷಣ, ಜಾಗೃತಿ ನೀಡುವುದನ್ನು ಈ ದಿನವು ಸೂಚಿಸುತ್ತದೆ.

ವಿಶ್ವ ಹಿಮೋಫಿಲಿಯಾ ದಿನ 2025 ರ ಥೀಮ್

ವಿಶ್ವ ಹಿಮೋಫಿಲಿಯಾ ದಿನ 2025 "ಎಲ್ಲರಿಗೂ ಪ್ರವೇಶ: ಮಹಿಳೆಯರು ಮತ್ತು ಹುಡುಗಿಯರಿಗೂ ರಕ್ತಸ್ರಾವ''. ಎಂಬ ವಿಶೇಷ ವಾಖ್ಯಾದೊಡನೆ ಆಚರಣೆಗೆ ಮುಂದಾಗಲಾಗಿದೆ. ಇತಿಹಾಸದಲ್ಲಿ ಪುರುಷದಲ್ಲಿನ ಈ ಸಮಸ್ಯೆಯನ್ನು ಹೆಚ್ಚಾಗಿ ಪರಿಗಣಿಸಿ ಮಹಿಳೆಯರಲ್ಲಿನ ರಕ್ತಸ್ರಾವವು ಸಾಮಾನ್ಯ ಎಂದು ಬಿಂಬಿಸಲಾಗಿದೆ. ಈ ಅಂತರ ಕಡಿಮೆ ಮಾಡುವ ಉದ್ದೇಶವು ಈ ದಿನದ ಆಚರಣೆಯ ಹಿಂದಿದೆ.

ನಿಮ್ಮಲ್ಲೂ ಹಿಮೋಫಿಲಿಯಾ ಇರಬಹುದಾ?

ಈ ಹಿಮೋಫಿಲಿಯಾ ಉಂಟಾಗಿರುವುದು ರಕ್ತಸ್ರಾವವಾದಾಗ ಪತ್ತೆ ಮಾಡುವುದು ಸುಲಭ. ನಿಮ್ಮಲ್ಲಿ ಸಣ್ಣ ಪುಟ್ಟ ಗಾಯವಾದಾಗ ರಕ್ತ ಬರುವುದು ನಿಲ್ಲದೆ ಇದ್ದರೆ ಅಥವಾ ಸಣ್ಣ ಗಾಯ ದೊಡ್ಡದಾಗುತ್ತಾ ಸಾಗಿದರೆ ಈ ಸಮಸ್ಯೆ ಇರಬಹುದು.

ಕೀಲು ಮತ್ತು ಸ್ನಾಯುಗಳಲ್ಲಿ ರಕ್ತಸ್ರಾವ

ಕೀಲುಗಳಲ್ಲಿ ರಕ್ತಸ್ರಾವ ಸಂಭವಿಸಬಹುದು, ನೋವು, ಊತ ಮತ್ತು ಬಿಗಿತ ಉಂಟುಮಾಡುತ್ತದೆ, ವಿಶೇಷವಾಗಿ ಮೊಣಕಾಲುಗಳು, ಮೊಣಕೈಗಳು ಮತ್ತು ಕಣಕಾಲುಗಳಲ್ಲಿ. ಇದು ಸ್ನಾಯುಗಳಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು, ಹೆಮಟೋಮಾಗಳನ್ನು ರೂಪಿಸುತ್ತದೆ.

ಇತರ ರಕ್ತಸ್ರಾವ
ಮೂಗಿನ ರಕ್ತಸ್ರಾವ ಬಾಯಿ ಮತ್ತು ಒಸಡುಗಳಲ್ಲಿ ರಕ್ತಸ್ರಾವ ಮತ್ತು ಮೂತ್ರ ಅಥವಾ ಮಲದಲ್ಲಿ ರಕ್ತ ಸ್ರಾವವಾಗುವುದು ನೋಡಬಹುದು. ಹಿಮೋಫಿಲಿಯಾ ಹೊಂದಿರುವ 10,000 ವ್ಯಕ್ತಿಗಳಲ್ಲಿ ಸುಮಾರು 35-36 ಸಾವುಗಳ ಪ್ರಮಾಣವಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries