ಬೆಳಗ್ಗೆ ತಿಂಡಿಗೆ ಅಥವಾ ಊಟದ ಜೊತೆಗೆ ಅದ್ಭುತ ರುಚಿಯ ಯಾವುದಾದರು ಚಟ್ನಿ, ಗ್ರೇವಿ, ಗೊಜ್ಜು ಸೈಡ್ ಡಿಶ್ ಆಗಿ ಸವಿಯುವುದು ನೋಡಬಹುದು. ತಿಂಡಿಯ ಜೊತೆಗೆ ಒಂದು ಯಾವುದಾದರು ಪಲ್ಯ, ಗೊಜ್ಜು ಇದ್ದರೆ ಅದರ ರುಚಿ ಸವಿದರೆ ನಿಮ್ಮ ಆದಿನ ಬಹಳ ಅದ್ಭುತವಾಗಿರುತ್ತೆ. ಹಾಗೆ ಈ ಗೊಜ್ಜು ಹಲವು ದಿನ ಫ್ರಿಡ್ಜ್‌ನಲ್ಲಿಟ್ಟು ಸವಿಯಬಹುದು. ಅದರಲ್ಲೂ ನಾವಿಂದು ಹಸಿ ಟೊಮಟೋ ಗೊಜ್ಜು ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.
ಹಸಿ ಟೊಮೆಟೋ ಬಳಸಿ ಎಷ್ಟೆಲ್ಲಾ ಖಾದ್ಯ ರೆಡಿ ಮಾಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಹಸಿ ಟೊಮೆಟೋ ಹುಳಿಯಾಗಿರುವ ಕಾರಣ ಅದಕ್ಕೆ ಒಂದಿಷ್ಟು ಮಸಾಲೆಗಳ ಬೆರೆಸಿದರೆ ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತೆ. ಹೀಗಾಗಿ ಟೊಮೆಟೋ ಚಟ್ನಿ ಗೊಜ್ಜು ಹೆಚ್ಚಾಗಿ ಮಾಡುವುದು ನೋಡುಬಹುದು. ಆಗೆ ಈ ಹಸಿ ಟೊಮೆಟೋದಿಂದ ಮಾಡುವ ಗೊಜ್ಜಿನ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಹಸಿ ಟೊಮೆಟೋ ಬಳಸಿ ಮಾಡುವ ಸುಲಭದ ಈ ಚಟ್ನಿ ಅಥವಾ ಗೊಜ್ಜು ಬಹಳ ರುಚಿಯಾಗಿರುತ್ತೆ. ನೀವು ಮಾಡಿದರೆ ತಿಂಡಿಯ ಜೊತೆಗೆ ಊಟಕ್ಕೂ ಕೂಡ ಅದ್ಭುತ ರುಚಿ ನೀಡಲಿದೆ. ಅದರಲ್ಲೂ ಬೆಳಗ್ಗೆ ಯಾವುದೇ ತಿಂಡಿ ಮಾಡಿದ್ದರೂ ಕೂಡ ಈ ಹಸಿ ಟೊಮೆಟೋ ಗೊಜ್ಜು ಅದ್ಭುತ ರುಚಿ ನೀಡುತ್ತೆ. ಹಾಗೆ ಇದರಲ್ಲಿನ ಹಲವು ಅಂಶಗಳು ನಿಮ್ಮ ಆರೋಗ್ಯಕ್ಕೂ ಬಹಳ ಉತ್ತಮ ಎನಿಸಿದೆ. ಹಾಗಾದ್ರೆ ನಾವಿಂದು ಹಸಿ ಟೊಮೆಟೋ ಗೊಜ್ಜು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ಹಸಿ ಟೊಮೆಟೋ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಸಿ ಟೊಮೆಟೋ ಗೊಜ್ಜು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಹಸಿ ಟೊಮೆಟೋ ಬದನೆಕಾಯಿ ಹಸಿರು ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಬೆಳ್ಳುಳ್ಳಿ ಜೀರಿಗೆ ಈರುಳ್ಳಿ ಸಾಸಿವೆ ಕರಿಬೇವು ಅಡುಗೆ ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು
ಹಸಿ ಟೊಮೆಟೋ ಗೊಜ್ಜು ಮಾಡುವುದು ಹೇಗೆ? ಮೊದಲು ಮುಳ್ಳು ಬದನೆಕಾಯಿಯನ್ನು ಹೆಚ್ಚಿಕೊಂಡು ನೀರಿಗೆ ಹಾಕಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ನೀರು ಬಿಸಿಯಾದಾಗ ಅದಕ್ಕೆ ಹಸಿ ಮೆಣಸು, ಹಸಿ ಟೊಮೆಟೋ, ಕೊತ್ತಂಬರಿ ಸೊಪ್ಪು, ಹೆಚ್ಚಿಕೊಂಡ ಬದನೆಕಾಯಿ ಹಾಕಿ ಬೇಯಿಸಿಕೊಳ್ಳಿ. 10 ನಿಮಿಷ ಬೇಯಿಸಿದ ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ ಸಣ್ಣ ಮಿಕ್ಸಿ ಜಾರ್‌ಗೆ ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಹಾಗೆ ಇದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೇಯಿಸಿಕೊಂಡಿರುವ ಎಲ್ಲಾ ಪದಾರ್ಥಗಳನ್ನು ಹಾಕಿ ಜೊತೆಗೆ ಹುಣಸೆ ಹುಳಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು. ಒಂದು ಸೌಟಿಯಲ್ಲಿ ಒತ್ತಿಕೊಂಡರೆ ಸಾಕು. ಈ ರೀತಿ ಸ್ಮ್ಯಾಶ್ ಮಾಡಿಕೊಂಡ ಬಳಿಕ ಅದೆ ಪಾತ್ರೆಯಲ್ಲಿ ಬಿಡಿ. ಈಗ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಅದಕ್ಕೆ ಸಾಸಿವೆ, ಈರುಳ್ಳಿ, ಕರಿಬೇವು ಹಾಕಿ ಮಿಕ್ಸ್ ಮಾಡಿಕೊಂಡು ಇದನ್ನು ಪಾತ್ರೆಯಲ್ಲಿರುವ ಟೊಮೆಟೋ ಗೊಜ್ಜಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬಾಯಲ್ಲಿ ನೀರು ತರಿಸುವಂತಹ ಹಸಿ ಟೊಮೆಟೋ ಗೊಜ್ಜು ರೆಡಿಯಾಗುತ್ತದೆ. ನೀವು ಸಹ ಮಾಡಿ ನೋಡಿ.






