ಕೊಚ್ಚಿ: ಆಂಓSಂಈ ತಪಾಸಣೆಯ ವೇಳೆ ನಟ ಶೈನ್ ಟಾಮ್ ಚಾಕೊ ಖಾಸಗಿ ಹೋಟೆಲ್‍ನಿಂದ ತಪ್ಪಿಸಿಕೊಂಡದ್ದು ಒಂದು ಸಾಹಸಿಕ ಘಟನೆ ಎಂಬ ವರದಿಗಳು ಹೊರಬೀಳುತ್ತಿವೆ. ಹೋಟೆಲ್‍ನಲ್ಲಿ ಮಾದಕ ದ್ರವ್ಯ ಸೇವನೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಂಓSಂಈ ತಂಡವು ಕೊಚ್ಚಿಯ ಹೋಟೆಲ್‍ಗೆ ಆಗಮಿಸಿ ಪರಿಶೀಲನೆ ನಡೆಸಿತ್ತು.
ಶೈನ್ ಮತ್ತು ಅವನ ತಂಡ ಮೂರನೇ ಮಹಡಿಯ ಕೊಠಡಿ ಸಂಖ್ಯೆ 314 ರಲ್ಲಿತ್ತು. ಶೈನ್ ಕೋಣೆಯಿಂದ ಕಿಟಕಿಯ ಮೂಲಕ ಎರಡನೇ ಮಹಡಿಯಲ್ಲಿರುವ ಕಿಟಕಿ ಮೇಲಿನ ಪ್ರದೇಶಕ್ಕೆ ಹಾರಿದ್ದನು. ಇಲ್ಲಿಂದ, ಅವನು ಮೊದಲ ಮಹಡಿಯಲ್ಲಿರುವ ಈಜುಕೊಳಕ್ಕೆ ಹಾರಿ, ನಂತರ ಮೆಟ್ಟಿಲುಗಳ ಮೂಲಕ ಹೊರಗೆ ಪಲಾಯನಗೈದಿದ್ದ. ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗಿವೆ. ರಾತ್ರಿ 11 ಗಂಟೆಗೆ ತಪಾಸಣೆ ನಡೆಸಲಾಯಿತು.
ಕೋಣೆಯಲ್ಲಿ ಶೈನ್ ಜೊತೆಗೆ ಮೂವರಿದ್ದರು. ಇಬ್ಬರು ಶೈನ್ ಜೊತೆ ಓಡಿಹೋದರು. ಮೂರನೇ ವ್ಯಕ್ತಿಯನ್ನು ಪೆÇಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಕೋಣೆಯಲ್ಲಿ ಹುಡುಕಾಟ ನಡೆಸಿದರೂ ಏನೂ ಲಭಿಸದ ಕಾರಣ ಅವರನ್ನು ಬಿಡುಗಡೆ ಮಾಡಲಾಯಿತು.
2015 ರಲ್ಲಿ ಮಾದಕವಸ್ತು ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಶೈನ್, ಮತ್ತೆ ಒಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾನೆ. ಆರಂಭದಲ್ಲಿ ಕುಡಿದ ಅಮಲಿನಲ್ಲಿ ನಟ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೆಸರು ಹೇಳದೆ ಹೇಳಿದ್ದ ನಟಿ ವಿನ್ಸಿ ಅಲೋಶಿಯಸ್, ನಂತರ ಶೈನ್ ಟಾಮ್ ಹೆಸರನ್ನು ಬಹಿರಂಗಪಡಿಸಿ ಚಲನಚಿತ್ರ ಸಂಸ್ಥೆಗಳಿಗೆ ದೂರು ದಾಖಲಿಸಿದ್ದರು.
ಹೇಮಾ ಸಮಿತಿ ವರದಿ ಬಿಡುಗಡೆಯಾದಾಗ ಚಲನಚಿತ್ರೋದ್ಯಮದಲ್ಲಿ ಮಾದಕ ದ್ರವ್ಯಗಳ ವ್ಯಾಪಕ ಬಳಕೆಯ ಬಗ್ಗೆಯೂ ಭಾರೀ ವರದಿಯಾಯಿತು. ಏತನ್ಮಧ್ಯೆ, ವಿನ್ಸಿ ಆರೋಪಗಳ ವಿರುದ್ಧ ಶೈನ್ ಟಾಮ್ ಕುಟುಂಬ ಅಲ್ಲಗೆಳೆದಿದೆ. ತನಗೆ ಬಾಲ್ಯದಿಂದಲೂ ವಿನ್ಸಿ ಮತ್ತು ವಿನ್ಸಿಯವರ ಕುಟುಂಬದೊಂದಿಗೆ ಸಂಬಂಧವಿದೆ. ಎರಡೂ ಕುಟುಂಬಗಳು ಪೊನ್ನಾನಿಯಲ್ಲಿ ಒಟ್ಟಿಗೆ ಇದ್ದವು. ಇಬ್ಬರೂ ತುಂಬಾ ಹತ್ತಿರವಾಗಿದ್ದಾರೆ. ಕ್ಯಾಮೆರಾ ಮುಂದೆ ಪ್ರತಿಕ್ರಿಯಿಸುವುದಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ.






