ಕಾಸರಗೋಡು: ಎರಿಯಕೋಟ ಶ್ರೀ ಭಗವತಿ ಕ್ಷೇತ್ರ ಕಳಗ ವ್ಯಾಪ್ತಿಯ ಕಿಯಕ್ಕೇವೀಡ್ ಪಾಲಾ ತೀಯ ಶ್ರೀ ವಿಷ್ಣು ಮೂರ್ತಿ ವಯನಾಡು ಕುಲವನ್ ತರವಾಡಿನ ತೆಯ್ಯಂ ಕೆಟ್ಟು ಮಹೋತ್ಸವ ಏ. 17ರಿಂದ 20ರ ವರೆಗೆ ಜರುಗಲಿರುವುದಾಗಿ ಕ್ಷೇತ್ರ ಸಮಿತಿ ಪದಾಧಿಕಾರಿ ರಾಜನ್ ಪೆರಿಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
17ರಂದು ಬೆಳಗ್ಗೆ 10.30ಕ್ಕೆ ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯುವುದು. ಸಂಜೆ 7ಕ್ಕೆ ಭಂಡಾರದ ಆಗಮನದೊಂದಿಗೆ ದೈವಗಳ ಸೇರುವಿಕೆ, 18 ರಂದು ಬೆಳಗಿನ ಜಾವ 1ರಿಂದ ವಿವಿಧ ದೈವಗಳ ಕೋಲ ಆರಂಭಗೊಳ್ಳುವುದು. ಅಂದು ಸಂಜೆ ಶ್ರೀವಯನಾಟ್ಟು ಕುಲವನ್ ದೈವದ ಸೇರುವಿಕೆ, 19 ರಂದು ರಾತ್ರಿ 8ಕ್ಕೆ ಶ್ರೀ ಕಂಡನಾರ್ಕೇಳನ್ ದೈವದ ದೀಕ್ಷಾಸ್ನಾನ ಸಮಾರಂಭ, ಶ್ರೀ ವಯನಾಟ್ ಕುಲವನ್ ದೈವದ ವೆಲ್ಳಾಟ, 20ರಂದು ಸಂಜೆ 4.30ಕ್ಕೆ ಶ್ರೀ ವಯನಾಟ್ ಕುಲವನ್ ತೆಯ್ಯಂನ ಸಮಾರೋಪ ಸಮಾರಂಭ ನಡೆಯುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಿವಾಕರನ್ ಕಾವುಗೋಳಿ ಮತ್ತು ಅನಿಲ್ ಕುಮಾರ್ ನೀರ್ಚಾಲು, ಕೆ.ಪಿ. ಚಂದ್ರಶೇಖರ ಕಾರ್ನವರ್, ಅಶೋಕನ್ ಕೂಡ್ಲು, ಎ.ರಾಮದಾಸ್ ಆರಿಕ್ಕಾಡಿ, ದಾಮೋದರನ್ ಎ, ಆನಂದನ್ ಚೆಮ್ನಾಡ್, ಪುಷ್ಪರಾಜನ್ ಎನ್.ಎಸ್, ಸುನೀಲ ಕುಮಾರ್ ಪಿ.ಟಿ ಉಪಸ್ಥಿತರಿದ್ದರು.




