ಕುಂಬಳೆ: ಪುತ್ತಿಗೆ ಪಂಚಾಯಿತಿ ಮುಗು ಪೊನ್ನೆಂಗಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಕಾಂಗ್ರೆಸ್ ಪುತ್ತಿಗೆ ಮಂಡಲ ಕಾಂಗ್ರೆಸ್ ಸಮಿತಿ ಅದ್ಯಕ್ಷ ಊಜಂಪದವು ನಿವಾಸಿ ಸುಲೈಮಾನ್, ಸಿಪಿಎಂ ಕಾರ್ಯಕರ್ತರಾದ ಮುಗು ನಿವಾಸಿ ನವಾಬ್ ಹಾಗೂ ಅಬೂಬಕ್ಕರ್ ಸಿದ್ದಿಕ್ ಗಾಯಾಳುಗಳು.
ಸುಲೈಮಾನ್ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆ ಹಾಗೂ ಉಳಿದವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊನ್ನೆಂಗಳದಲ್ಲಿ ನಡೆದ ಗೃಹಪ್ರವೇಶ ಸಮಾರಂಭದಲ್ಲಿ ಈ ಮೂರುಮಂದಿ ಪಾಲ್ಗೊಂಡಿದ್ದರು. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿಪಿಎಂ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಘರ್ಷಣೆ ಸೃಷ್ಟಿಸಿ ಹಲ್ಲೆ ನಡೆಸಿರುವುದಾಗಿ ಸುಲೈಮಾನ್ ಆರೋಪಿಸಿದ್ದಾರೆ. ಬಸ್ ನಿಲ್ದಾಣವೊಂದನ್ನು ಕೆಡವಿಹಾಕಿರುವ ವಿಷಯ ಪ್ರಸ್ತಾಪಗೊಂಡು ತಮ್ಮ ಮೇಲಿನ ಆರೋಪದ ಬಗ್ಗೆ ಸ್ಪಷಟನೆ ಕೇಳಲು ಮುಂದಾಗುತ್ತಿದ್ದಂತೆ ತಮ್ಮ ಮೇಲೆ ಹಲ್ಲೆಗೈದಿರುವುದಾಗಿ ನವಾಬ್ ಹಾಗೂ ಅಬೂಬಕ್ಕರ್ ಸಿದ್ದೀಕ್ ದೂರಿದ್ದಾರೆ.




